
ಬೆಳಗಾವಿ:
ಕನ್ನಡ ಸುದ್ದಿಲೋಕದಲ್ಲಿ ತನ್ನದೇ ವಿಶಿಷ್ಟ ಹೆಜ್ಜೆ ಗುರುತಿನ ಮೂಲಕ ಕನ್ನಡಿಗರ ಮನಸಲ್ಲಿ ಮನೆ ಮಾಡಿರುವ ಹೆಮ್ಮೆಯ ನ್ಯೂಸ್18 ಕನ್ನಡ ವಾಹಿನಿ ಬೆಳಗಾವಿಯಲ್ಲಿ ಎರಡನೇ ಬಾರಿಗೆ ಕನ್ನಡ ಹಬ್ಬ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಕಳೆದ ಬಾರಿ ನಡೆದ ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಬಂಬಲ ದೊರೆತಿತ್ತು.ಹೆಮ್ಮೆಯ ಬೆಳಗಾವಿ ಕನ್ನಡಿಗರು ನ್ಯೂಸ್ 18 ಕನ್ನಡದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಅಲ್ಲದೇ ನಾಡಿನ ಹಲವಾರು ಕಲಾವಿದರು,ಹಾಡುಗಾರರು, ನೃತ್ಯಕಲಾವಿದರು, ಹಾಸ್ಯ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಈ ಬಾರಿಯೂ ಸಹ ಬೆಳಗಾವಿಯಲ್ಲಿ ಮತ್ತೊಮ್ಮೆ ಕರುನಾಡ ಹಬ್ಬವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು ಇದೇ ಆಗಸ್ಟ್ 21, 22 ಹಾಗೂ 23ರಂದು ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗಾವಿಯ ವಂಟಮೂರಿ ಆಟದ ಮೈದಾನ (ಶ್ರೀನಗರದ ಡಬಲ್ ರಸ್ತೆ) ಬಳಿ ಅದ್ದೂರಿ ಕನ್ನಡ ಹಬ್ಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕನ್ನಡದ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿಯ ಸಂಭ್ರಮದಲ್ಲಿ ಭಾಗವಹಿಸಲು ಬೆಳಗಾವಿಯ ಹೆಮ್ಮೆಯ ಕನ್ನಡಿಗರಿಗೆ ನ್ಯೂಸ್ 18. ಸಂಸ್ಥೆ ಆತ್ಮೀಯವಾಗಿ ಆಹ್ವಾನಿಸಿದೆ.
ಕನ್ನಡದ ತೇರು ಎಳೆಯಲು ಕನ್ನಡಿಗರು ಸಜ್ಜಾಗಬೇಕಿದ್ದು ಅದ್ದೂರಿ ಕಾರ್ಯಕ್ರಮಕ್ಕೆ ಬೆಳಗಾವಿಯ ಕನ್ನಡ ಮನಸುಗಳು ಸಾಕ್ಷಿಯಾಗಬೇಕಿದೆ.
ಎಲ್ಲರೂ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿ
ಜೈ ನ್ಯೂಸ್ 18 ಕನ್ನಡ ಜೈ ಕನ್ನಡ ಜೈ ಕರ್ನಾಟಕ











