Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಮನೋರಂಜನೆ

ದುಡ್ಡು ತೆಗೆದುಕೊಂಡು ಚಾಂಪಿಯನ್ ಚಿತ್ರಕ್ಕೆ ಮೋಸ ಮಾಡಿದ್ರಾ ಅದಿತಿ..? ಚಾಂಪಿಯನ್ ನಿರ್ಮಾಪಕ ಗರಂ

ಬೆಂಗಳೂರು :  ನಟಿ ಅದಿತಿ ಪ್ರಭುದೇವಗೆ ಕೊಡಬೇಕಾದ ಹಣವನ್ನ ಕೊಟ್ಟಿದ್ದೇವೆ..  ಅದಿತಿ ಪ್ರಭುದೇವ ಪ್ರಮೋಷನ್​​ಗೆ ಬರಲ್ಲ ಅಂತ ಹೇಳಿದ್ದು, ಚಾಂಪಿಯನ್​ ಪ್ರಮೋಷನ್​ಗೆ ಸರಿಯಾಗಿ ಬಂದಿಲ್ಲ. ನಮ್ಮ ಸಿನಿಮಾ ಟೈಮ್​​ನಲ್ಲಿ ಅವರು ತುಂಬಾ ಬ್ಯುಸಿಯಾಗಿದ್ದರು. ಇಷ್ಟು ದುಡ್ಡು ಖರ್ಚು ಮಾಡಿ ಸಿನಿಮಾ ಮಾಡಿದ್ವಿ, ಆದ್ರೆ ಅವರು ನಟಿಯಾಗಿ ಸರ್ಪೋಟ್​ ಮಾಡಿಲ್ಲ. ಇಂಟರ್ವ್ಯೂ ಟೈಮ್​ನಲ್ಲಿ ಬಂದಿದ್ದಾರೆ.. ಪ್ರಮೋಷನ್​ಗೆ ಬಂದಿಲ್ಲ. ನಮ್ಮ ಸಿನಿಮಾಕ್ಕೆ.. 2 ಹರ್ವಸ್​​ ಟೈಮ್​ ಕೊಡಬಹುದಿತ್ತು ಎಂದು ನಿರ್ಮಾಪಕ ಶಿವಾನಂದ್ ಹೇಳಿದ್ಧಾರೆ.
​ ಅದಿತಿ ಪ್ರಭುದೇವ  ಚಾಂಪಿಯನ್​ ಸಿನಿಮಾ ತಂಡಕ್ಕೆ ಮೋಸ ಮಾಡಿದ್ದು, ಉತ್ತರ ಕರ್ನಾಟಕದ ಯುವ ಪ್ರತಿಭೆ ಸಚಿನ್ ಧನಪಾಲ್ ನಾಯಕನಾಗಿ ಅಭಿನಯಸಿದ ಚಾಂಪಿಯನ್ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಚಿತ್ರ ವೀಕ್ಷಿಸಿದ ಬಹುತೇಕರು ಆ್ಯಕ್ಷನ್ ಬ್ಲಾಕ್ ಹಾಗೂ ಹಾಡುಗಳ ಬಗ್ಗೆಯೇ ಹೆಚ್ಚು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಗೆಲುವಿನ ಸಂತಸವನ್ನು ನಿರ್ಮಾಪಕ ಶಿವಾನಂದ್ ಎಸ್.ನೀಲಣ್ಣನವರ್ ಹಾಗೂ ನಾಯಕ ಸಚಿನ್ ಧನಪಾಲ್ ಮಾದ್ಯಮ ಮಿತ್ರರೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿಯೇ ನಿರ್ಮಾಪಕ ಶಿವಾನಂದ್​​ ನಾಯಕಿ ಅದಿತಿ ಮೇಲೆ ಗರಂ ಆಗಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!