Uncategorized

ಬಾಲಚಂದ್ರ ಜಾರಕಿಹೊಳಿ ಮನೆಯಲ್ಲಿ ಅಚ್ಚರಿ!ನಾಗದೇವರಿಗೆ ಹಾಲೆರೆಯುತ್ತಿದ್ದಂತೆ ಬಂದ ದಿಟ ನಾಗರ!

ಬೆಳಗಾವಿ:

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ ನಿವಾಸದಲ್ಲಿ ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.ನಾಗರಪಂಚಮಿ ದಿನವೇ ಗೋಕಾಕ ನಗರದ ನಿವಾಸದಲ್ಲಿ ಅಚ್ಚರಿಯ ಘಟನೆ ನಡೆದಿದ್ದು ನಾಗದೇವರಿಗೆ ಪೂಜೆಗೈದ ಕೆಲವೇ ಕ್ಷಣಗಳಲ್ಲಿ ಶಾಸಕರ ನಿವಾಸದ ಆವರಣಕ್ಕೆ ನಾಗರಹಾವು ಪ್ರತ್ಯಕ್ಷಗೊಂಡು ಎಲ್ಲರಲ್ಲಿ ಎಚ್ಚರಿ ಮೂಡಿಸಿದೆ.ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಎನ್‌ಎಸ್‌ಎಫ್‌ ಹಿಂಭಾಗದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಕೆ ಮಾಡಲಾಗಿದ್ದು ನಾಗದೇವರಿಗೆ ಪೂಜೆ ಸಲ್ಲಿಸಿ ಹಾಲೆರೆದು ನಿವಾಸಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ‌ ವಾಪಸ್ ಆಗುತ್ತಿದ್ದಂತೆ ಹಾಲೆರೆದು ಕೆಲವೇ ಕ್ಷಣಕ್ಕೆ ನಾಗದೇವರ ಬಳಿ ನಾಗರಹಾವು ಬಂದಿದೆ.ನಾಗರಹಾವು ನಾಗದೇವರ ಕೆಲಹೊತ್ತು ಸಮಯ ಕಳೆದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲೆಡೆ ವ್ಯಾಪಕ ಪ್ರಚಾರವಾಗುತ್ತಿವೆ.

TV24 News Desk
the authorTV24 News Desk

Leave a Reply

error: Content is protected !!