


ಬೆಳಗಾವಿ:
ಬೆಳಗಾವಿಯಲ್ಲಿ ಬರ ಹಾಗೂ ಪ್ರಕೃತಿವಿಕೋಪಕ್ಕೆ ಸಂಬಂಧಪಟ್ಟಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲೆಯ ಸದ್ಯದ ಸ್ಥಿತಿಗತಿಗಳ ಕುರಿತು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಮಳೆಯಾಗದ ಕಡೆಗೆ ತೊಂದರೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸಚಿವವರು ಸೂಚನೆ ನೀಡಿದರು.ಇನ್ನು ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಲ್ಲಿ ನೀರಿಗಾಗಿ ಆತಂಕ ಪಡುವ ಸ್ಥಿತಿ ಇಲ್ಲ ಇವತ್ತಿನಿಂದ ಡ್ಯಾಂಗಳಿಗೆ ಒಳ ಹರಿವು ಆರಂಭವಾಗಿದೆ ಹೀಗಾಗಿ ನಮಗಿದ್ದ ಆತಂಕ ದೂರವಾಗಿದೆ.
ಇನ್ನೂ ಮೂರು, ನಾಲ್ಕು ದಿನ ಮಳೆ ಆಗೋ ಸೂಚನೆ ಇದೆ.
ರಕ್ಕಸಕೊಪ್ಪಕ್ಕೆ ಜಲಾಶಯಕ್ಕೆ ಒಳ ಹರಿವು ಆರಂಭವಾಗಿದೆ ಅದರಿಂದ ಬೆಳಗಾವಿ ನಗರಕ್ಕೆ ನೀರಿನ ಆತಂಕ ದೂರವಾಗಿದೆ.
ಜಿಲ್ಲೆಯ ಐದು ನದಿಗಳಿಗೆ ನೀರು ಹರಿದು ಬರುತ್ತಿದೆ ಎಂದರು. ಇನ್ನು ಬೆಳೆ ಹಾನಿ ಬಗ್ಗೆ ಸರ್ವೇ ಮಾಡಲು ಸರ್ಕಾರ ಹೇಳಿಲ್ಲ ಇನ್ನೂ ಆ ಪ್ರಶ್ನೆ ಬಂದಿಲ್ಲ ವಾಡಿಕೆಗಿಂತ ಶೇ 29ರಷ್ಟು ಕಮ್ಮಿ ಮಳೆಯಾಗಿದೆ.
ಇಂದಿನ ರೀತಿಯಲ್ಲಿ ಮಳೆಯಾದ್ರೆ ಎಲ್ಲಾ ಸರಿಯಾಗಲಿದೆ ಎಂದರು. ಇನ್ನು ಮಾಧ್ಯಮಗಳು ಕೇಳಿದ ಮೋಡ ಬಿತ್ತನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಅವಶ್ಯಕತೆ ಬಿದ್ರೆ ಮೋಡ ಬಿತ್ತನೆ ಮಾಡುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿದರು.











