ಭಾರತದಲ್ಲಿ ಮೊತ್ತ ಮೊದಲಿಗೆ ಕೇರಳದಲ್ಲಿ ಪತ್ತೆಯಾದ ಕರೋನಾ ವೈರಸ್‌ನ ಜೆಎನ್.1 ರೂಪಾಂತರ ಇದೀಗ ಮತ್ತೆರಡು ರಾಜ್ಯಗಳಲ್ಲೂ ಕಾಣಿಸಿಕೊಂಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಒಂದು ಮತ್ತು ಗೋವಾದಲ್ಲಿ 18 JN.1 ಪ್ರಕರಣ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಕಳವಳ ಹೆಚ್ಚಾಗುವಂತೆ ಮಾಡಿದೆ.
9ದಿನಗಳಲ್ಲಿ ದ್ವಿಗುಣಗೊಂಡ ಕೊರೊನಾ ಪ್ರಕರಣ:
ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮತ್ತೆ ಆತಂಕ ಸೃಷ್ಟಿಸಿರುವ ಕರೋನಾ ವೈರಸ್‌ನ ಜೆಎನ್.1 ರೂಪಾಂತರವು ಇದೀಗ ಭಾರತದಲ್ಲೂ ದಾಪುಗಾಲಿಟ್ಟಿದ್ದು ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಗಮನಾರ್ಹವಾಗಿ, ಡಿಸೆಂಬರ್ 11 ರಂದು, ದೇಶದಲ್ಲಿ ಒಟ್ಟು 938 ಕರೋನಾ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ನಿನ್ನೆ (ಡಿ.19) ವೇಳೆಗೆ ಈ ಅಂಕಿಅಂಶಗಳು ಎರಡು ಸಾವಿರದತ್ತ ಸಮೀಪಿಸಿದ್ದು ಕೇವಲ 9 ದಿನಗಳಲ್ಲಿ ಕೊರೊನಾ ಪ್ರಕರಣಗಳು ದ್ವಿಗುಣಗೊಂಡಿದೆ. ಆದಾಗ್ಯೂ, ಪ್ರಸ್ತುತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಕಾಲೋಚಿತ ಮಾದರಿಯಾಗಿ ನೋಡಬೇಕು ಎಂದು INSACOG (ಸೆಂಟ್ರಲ್ ಗೌರ್ನಮೆಂಟ್ ಫೋರಂ ಲ್ಯಾಬ್ಸ್) ಹೇಳುತ್ತದೆ.
ಏನಿದು ಕೊರೊನಾವೈರಲ್ ಜೆಎನ್.1 ವೇರಿಯೆಂಟ್:
ಆರೋಗ್ಯ ತಜ್ಞರು ಮತ್ತು ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡುತ್ತಿರುವ JN.1 ಹೆಸರಿನ ಕೊರೊನಾವೈರಸ್ ರೂಪಾಂತರವು ಲಕ್ಸೆಂಬರ್ಗ್‌ನಲ್ಲಿ ಮೊದಲು ಗುರುತಿಸಲಾದ ಸಬ್ ವೇರಿಯೆಂಟ್ ಪಿರೋಲಾ ರೂಪಾಂತರದ (BA.2.86) ವಂಶಸ್ಥವಾಗಿದೆ. ಇದು ಸ್ವತಃ ಒಮಿಕ್ರಾನ್ ಸಬ್ ವೇರಿಯೆಂಟ್ ಎಂಬುದು ಗಮನಾರ್ಹವಾಗಿದೆ.