ಬೆಳಗಾವಿ:
ಬೆಳಗಾವಿ ನಗರದಲ್ಲಿ ಮಾಧಕದ್ರವ್ಯ ಸಾಗಾಟ ಮತ್ತು ಮಾರಾಟ ವಿಚಾರದಲ್ಲಿ ಹೆಚ್ಚಿನ ಕ್ರಮವನ್ನು ತೆಗೆದುಕೊಂಡಿದ್ದೆವೆ ಎಂದು ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ಬೆಳಗಾವಿ ನಗರದಲ್ಲಿ ಮಾದಕದ್ರವ್ಯ ಹಾಗೂ ಮಟ್ಕಾ ಗಾಂಜಾ ಕೇಸ್ಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಇಲಾಖೆಯಿಂದ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
2023 ರಲ್ಲಿ ಡ್ರಗ್ ವಿಚಾರಕ್ಕೆ 23 ಕೇಸ್ ದಾಖಲಿಸಲಾಗಿತ್ತು ಆ ಪೈಕಿ 33 ಜನರನ್ನು ಬಂಧಿಸಿ 12 ಕೆಜಿ ಗಾಂಜಾ ಜಪ್ತು ಮಾಡಲಾಗಿತ್ತು. ಇನ್ನು 2024 ರಲ್ಲಿ 25 ಕೇಸ್ ದಾಖಲಿಸಿಕೊಂಡು ಆ ಪೈಕಿ 39 ಜನರನ್ನು ಬಂಧಿಸಿ 11 ಕೆಜಿ ಗಾಂಜಾ ಜಪ್ತು ಮಾಡಿಲಾಗಿತ್ತು. ಇನ್ನು 2025 ರ ಈ ಅರ್ಧ ವರ್ಷದಲ್ಲಿಯೇ ಈಗಾಗಲೇ 20 ಕೇಸ್ ದಾಖಲಿಸಿಕೊಂಡು 42 ಜನರನ್ನು ಬಂಧಿಸಿ 17 ಕೆಜಿ ಗಾಂಜಾ ಸೇರಿದಂತೆ 550 ಮಿಲಿ ಗ್ರಾಂ ಸಿಂಥೆಟಿಕ್ ಡ್ರಗ್ ಸಹ ಜಪ್ತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಇನ್ನು ಮಟ್ಕಾ ಹಾಗೂ ಗ್ಯಾಂಬ್ಲಿಕ್ ವಿಚಾರದಲ್ಲಿ 2023 ರಲ್ಲಿ 123 ಕೇಸ್ 2024 ರಲ್ಲಿ 124 ಕೇಸ್ ದಾಖಲಾಗಿವೆ. ಈ ವರ್ಷ ಈವರೆಗೆ 95 ಕೇಸ್ ದಾಖಲಾಗಿವೆ. ಈವರೆಗೆ 256 ಜನರ ಮೇಲೆ ಕ್ರಮ ಕೈಗೊಂಡಿದ್ದೆವೆ.ಅಲ್ಲದೆ ಆರೋಪಿಗಳ ಗಡಿಪಾರು ಆದೇಶವನ್ನೂ ಸಹ ಮಾಡಲಿದ್ದೆವೆ. ಬೆಳಗಾವಿಯನ್ನು ನಶೆ ಮುಕ್ತ ನಗರವನ್ನಾಗಿ ಮಾಡಬೇಕು ಎನ್ನುವುದು ನಮ್ಮ ಆಶಯ. ಬೆಳಗಾವಿ ನಗರದ ನಿವಾಸಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಶಾಲಾ ಕಾಲೇಜುಗಳಿಗೆ ಈಗಾಗಲೇ ಪತ್ರ ಬರೆದಿದ್ದೆವೆ. ಆಂಟಿ ಡ್ರಗ್ ಕಮೀಟಿಗಳನ್ನು ಶಾಲಾ ಕಾಲೇಜುಗಳಲ್ಲೂ ಸಹ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ ಮಾಹಿತಿ ನೀಡಿದರು.

