Uncategorized

ಬರೀ ಹೆಣ್ಣೆ ಹೆರ್ತಿಯಾ! ವರದಕ್ಷಿಣೆ ತಗೊಂಡ ಬಾ ಅಂತ ವಿಡಿಯೋ ಕಾಲ್ ನಲ್ಲಿದ್ದಾಗಲೇ ಪತ್ನಿ ಮೇಲೆ ಪತಿ ಹಲ್ಲೆ!

ಬಾಗಲಕೋಟೆ:

ತನ್ನ ಹೆಂಡತಿ ಬರೀ ಹೆಣ್ಣೆ ಹರ್ತಾಳೆ ವರದಿಕ್ಷಿಣೆ ತರಲ್ಲ ಎಂದು ಪತಿಯೊಬ್ಬ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಬಾಗಲಕೋಟೆಯ ಜಮಖಂಡಿಯಲ್ಲಿ ಈ ಘಟನೆ ನಡೆದಿದ್ದು ಈ ಹಿಂದೆ ಇದೆ ಕಾರಣಕ್ಕೆ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಸೇರಿ ಒಟ್ಟು ಐವರ ವಿರುದ್ಧ ದೂರು ಅರ್ಜಿ ದಾಖಲಾಗಿತ್ತು. ಪತ್ನಿ ಅನಿಸಾ ಪತಿ ಸೇರಿ ಒಟ್ಟು ಐವರ ವಿರುದ್ಧ ದೂರು ಅರ್ಜಿ ಸಲ್ಲಿಸಿದ್ದರು. ದೂರು ಅರ್ಜಿ ಬಂದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪತಿ ಮೋಸೀನ್‌ ಹಾಗೂ ಆತನ ಕುಟುಂಬಸ್ಥರನ್ನು ಕರೆಸಿ ತಮ್ಮದೇ ಶೈಲಿಯಲ್ಲಿ ವಾರ್ನಿಂಗ್ ಮಾಡಿ ಕಳಿಸಿದ್ದರು. ಇನ್ನು ದಂಪತಿಯು 2022 ರಲ್ಲಿ ಮದುವೆಯಾಗಿದ್ದು ಬಾಗಲಕೋಟೆಯ ಜಮಖಂಡಿಯ ಮೋಸಿನ್ ಲಾಲಸಾಬ್ ಬಂಟನೂರು ಹಾಗೂ ಬೆಳಗಾವಿ ಜಿಲ್ಲೆಯ ರಾಯಭಾಗದ ಅನಿಸಾಗೆ ಮದುವೆಯಾಗಿತ್ತು. ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಮೋಸಿನ್ ಮತ್ತು ಅನಿಸಾ ಪ್ರೇಮದ ಸಂಕೇತವಾಗಿ ಒಂದು ಗಂಡು ಮಗವೂ ಸಹ ಜನಿಸಿತ್ತು. ಬಳಿಕ ಮಗಳು ಚನ್ನಾಗಿರಲಿ ಎಂದು ಆಕೆಗೆ 18 ಲಕ್ಷ ರೂಪಾಯಿ ನಿವೇಶನವನ್ನು ಅನಿಸಾ ತಂದೆ ನೀಡಿದ್ದರು ಎನ್ನಲಾಗಿದೆ. ಇದಾದ ಬಳಿಕ ಅನಿಸಾ ಮತ್ತೆ ಗರ್ಭಿಣಿಯಾಗಿದ್ದು ಎರಡನೇ ಬಾರಿ ಅನಿಸಾಗೆ ಅವಳಿ ಹೆಣ್ಣು ಮಕ್ಕಳು ಹುಟ್ಟಿದ್ದಕ್ಕಾಗಿ ಪತಿ ಹಾಗೂ ಆತನ ಮನೆಯವರು ಅನಿಸಾಗೆ ದೈಹಿಕ ಮಾನಸಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಅಲ್ಲದೇ ಅನಿಸಾ ತನ್ನ ಸಹೋದರನೊಂದಿಗೆ ವಾಟ್ಸಪ್ ವಿಡಿಯೋ ಕಾಲ್ ನಲ್ಲಿರುವಾಗಲೇ ಪತಿ ಮೋಸಿನ್ ಹಲ್ಲೆ ಮಾಡಿದ್ದು ರೆಕಾರ್ಡ್ ಆಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಠಾಣೆಗೂ ಸಹ ಅನಿಸಾ ದೂರು ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಪತಿ ಮೋಸಿನ್ ಲಾಲಸಾಬ್ ಬಂಟನೂರ,ಸಾಧಿಕ್ ಲಾಲಸಾಬ್ ಬಂಟನೂರ್, ವಸೀಮ್ ರಾಯಭಾಗ,ಅದಿಲ್ ಮುಸಾ, ಯಾಹಿಯಾ ಎಂಬುವವರ ವಿದುದ್ಧ ಜಮಖಂಡಿ ಠಾಣೆಗೆ ಪತ್ನಿ ಅನಿಶ ದೂರು ಅರ್ಜಿ ದಾಖಲಿಸಿದ್ದಾರೆ.

TV24 News Desk
the authorTV24 News Desk

Leave a Reply