Uncategorized

ಸೂಪರ್ ಸೀಡ್ ಆಗುತ್ತಾ ಪಾಲಿಕೆ! ವರದಿ ಕೇಳಿದ ಪ್ರಾದೇಶಿಕ ಆಯುಕ್ತರು!

ಪಾಲಿಕೆ ಆಯುಕ್ತರಿಂದ ವರದಿ ಕೇಳಿರುವ ಪ್ರಾದೇಶಿಕ ಆಯುಕ್ತರು!

ಬೆಳಗಾವಿ:

ಕಳೆದ ಮೂರು ತಿಂಗಳಿಂದ ಪಾಲಿಕೆಯ ಪರಿಷತ್ ಸಭೆಯನ್ನೇ ನಡೆಸದ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಸರಕಾರಕ್ಕೆ ಶಿಫಾರಸು ಮಾಡುವಂತೆ ಕನ್ನಡ ಸಂಘಟನೆಗಳು ಮಾಡಿದ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು ಇಂದು ಪಾಲಿಕೆಯ ಆಯುಕ್ತರಿಂದ ವರದಿ ಕೇಳಿದ್ದು ಮೂರೇ ದಿನಗಳಲ್ಲಿ ಸಮಗ್ರವಾದ ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಪ್ರಾದೇಶಿಕ ಆಯುಕ್ತರಾದ ಶ್ರೀಮತಿ
ಜಾನಕಿ ಅವರಿಗೆ ಮನವಿ ಸಲ್ಲಿಸಿತ್ತು.
ಮೂರು ತಿಂಗಳಿಂದ ಮಾಸಿಕ ಸಭೆಗಳು ನಡೆಯದ ಹಿನ್ನೆಲೆಯಲ್ಲಿ ನೂರಾರು ಅಭಿವೃದ್ಧಿ ವಿಷಯಗಳು ಬಾಕಿ ಉಳಿದಿವೆ ಇದರಿಂದ ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿದೆ.ಪಾಲಿಕೆಯು ರಾಜ್ಯ ಸರಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

TV24 News Desk
the authorTV24 News Desk

Leave a Reply

error: Content is protected !!