Uncategorized

ಮರದಡಿ ಸಿಲುಕಿ ಗಾಯಗೊಂಡ ವೃದ್ಧ ನಂದಗಡದಲ್ಲಿ ತಪ್ಪಿತು ಭಾರಿ ಅನಾಹುತ!

ಬೆಳಗಾವಿ:

ಮಳೆ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದು ಬೈಕ್ ಮೇಲೆ ಹೊರಟಿದ್ದ ವೃದ್ದನೋರ್ವ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ. ಗಾಯಗೊಂಡ ವೃದ್ದನ ಹೆಸರು ತಿಳಿದು ಬಂದಿಲ್ಲ. ಮರ ಬೀಳುತ್ತಿದ್ದಂತೆ ಮರದ ಕೊಂಬೆಯ ಅಡಿ ಸಿಕ್ಕು ವೃದ್ದ ಒದ್ದಾಡುತ್ತಿದ್ದನ್ನು ಕಂಡು ಸ್ಥಳೀಯರು ಕೂಡಲೇ ದಾವಿಸಿ ಕೆಳಗಡೆ ಸಿಕ್ಕಿದ್ದ ವೃದ್ದನನ್ನು ರಕ್ಷಿಸಿದ್ದಾರೆ. KA22EX2542 ನಂಬರಿನ ದ್ವಿಚಕ್ರವಾಹ ಸಂಪೂರ್ಣ ಜಖಂ ಆಗಿದ್ದು ನಂದಗಡದ ರಾಯಣ್ಣ ಸರ್ಕಲ್ ಬಳಿಯ ಮುಖ್ಯ ದಾರಿಯ ಮೇಲೆಯೇ ಮರ ಬಿದ್ದಿದೆ. ಮರ ಬಿದ್ದಿರುವುದರಿಂದ ವಾಹನ ಸವಾರರಿಗೂ ಸಹ ಸಂಚರಿಸಲು ಕಷ್ಟವಾಗುತ್ತಿದ್ದು ಸದ್ಯ ಸ್ಥಳಕ್ಕೆ ನಂದಗಡ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬಿದ್ದಿರುವ ಮರವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

TV24 News Desk
the authorTV24 News Desk

Leave a Reply