Uncategorized

ಒಟ್ ನಮ್ಮ ಜಿಲ್ಲಾಕ್ ಮೂರ ಸಚಿವ ಸ್ಥಾನ ಬೇಕ್ ನೋಡ್ರಿ ಸಿಎಂ ಸಾಹೇಬ್ರ!

ಬೆಳಗಾವಿ:

ರಾಜ್ಯ ರಾಜಕೀಯದಲ್ಲಿ ಇಡೀ ಕರ್ನಾಟಕವೇ ಒಂದು ತೂಕವಾದರೆ ಬೆಳಗಾವಿಯೇ ಒಂದು ತೂಕ ಅಂತ ಎಲ್ಲರಿಗೂ ಗೊತ್ತಿದೆ. ಸಧ್ಯ ಬೆಳಗಾವಿ ಜಿಲ್ಲೆಗೆ ಒಂದಲ್ಲ ಎರಡಲ್ಲ ಮೂರು ಸಚಿವ ಸ್ಥಾನ ನೀಡುವಂತೆ ಗಡಿಭಾಗದ ನಾಯಕರು ಬಿಗಿಪಟ್ಟು ಹಿಡಿದಿದ್ದಾರೆ.ಸಿಎಂ ಡಿಕೆಶಿ ಭೇಟಿ ಆಗಿ ಮೂರು ಸಚಿವ ಸ್ಥಾನಕ್ಕೆ ಬೆಳಗಾವಿ ಶಾಸಕರು ಬೇಡಿಕೆ ಇಟ್ಟಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಬೆಳಗಾವಿ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ನೀಡಲಾಗಿತ್ತು.ಈಗ ಮೂರು ಸ್ಥಾನ ನೀಡುವಂತೆ ಸಿಎಂ ಡಿಕೆಶಿ ಭೇಟಿ ಆಗಿ ಬೆಳಗಾವಿ ನಾಯಕರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನದ ಬೇಡಿಕೆಯ ಅಸಲಿಯತ್ತೇನು ಎನ್ನುವುದನ್ನು ಕೆದಕುತ್ತ ಹೋದರೆ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಲು ಡಿಕೆಶಿ ಒಲವು ಹರಿಸಿದ್ದಾರೆ ಎನ್ನಲಾಗಿದೆ.
ಸವದಿಗೆ ಮಿಸ್ ಆದ್ರೆ ಆಪ್ತೆಗೆ ಮತ್ತೊಂದು ಅವಕಾಶ ನೀಡಲು ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ‌.ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಮಿಸ್ ಆದ್ರೆ ಆಪ್ತೆ ಹೆಬ್ಬಾಳ್ಕರ್‌ ಅವರನ್ನು ಸಂಪುಟ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಮಹಿಳಾ, ಲಿಂಗಾಯತ ಕೋಟಾದಡಿ ಹೆಬ್ಬಾಳ್ಕರ್‌ಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಇದ್ದು
ಡಿಕೆಶಿ ಕೋಟಾದಲ್ಲಿ ಲಕ್ಷ್ಮಣ ಸವದಿ ಇಲ್ಲವೇ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಚಾನ್ಸ್ ಸಿಗಲಿದೆ ಎನ್ನಲಾಗಿದೆ.ಉಳಿದ ಇನ್ನೊಂದು ಸ್ಥಾನ ನಮಗೆ ಸಿಗಬಹುದು ಎಂಬುದು ಇನ್ನುಳಿದ ನಾಲ್ವರು ಶಾಸಕರು ಲೆಕ್ಕಾಚಾರ ಹಾಕಿದ್ದಾರೆ.
ಅಶೋಕ ಪಟ್ಟಣ್, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಆಸೀಫ್ ಸೇಠ್ ಲೆಕ್ಕಾಚಾರ ಹಾಕಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ಉತ್ತಮ ಬಾಂಧ್ಯವ್ಯ ಹೊಂದಿರುವ ಈ ನಾಲ್ವರು ಸಿದ್ದರಾಮಯ್ಯ ಮೂಲಕ ಒತ್ತಡ ಹಾಕಿ ಮಂತ್ರಿ ಆಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.ಹೀಗಾಗಿ ಎರಡಲ್ಲ, ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡುವಂತೆ ನಾಯಕರು ಸಿಎಂಗೆ ಬೇಡಿಕೆ ಇಟ್ಟಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ  ಮೂವರು ಮಂತ್ರಿಗಳಾಗಿದ್ದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ , ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಮೂವರು ಸಹ ಸಚಿವರಾಗಿದ್ದರು. ಪ್ರಸ್ತುತ ಸರ್ಕಾರದಲ್ಲಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ‌ ಲೋಕೊಪಯೋಗಿ ಸಚಿವರಾಗಿ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿ ಜಿಲ್ಲೆಯ ಏಕೈಕ ಸಚಿವರು ಎನ್ನಿಸಿಕೊಂಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಇನ್ನೊಂದು ಸ್ಥಾನವನ್ನು ಜಿಲ್ಲೆಗೆ ನಾವು ಕೇಳಿದ್ದೇವೆ ಎಂದು ಹೇಳಿದ್ದರು. ಆದರೆ ಲಕ್ಷ್ಮಿ ಹೆಬ್ಬಾಳಕರ್ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದರು. ಆದರೆ ಜಿಲ್ಲೆಯ ಶಾಸಕರ ಒಟ್ಟುಗೂಡಿ ಸಿಎಂ ‌ಮುಂದೆ ಮೂರು ಸಚಿವ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ  ಎನ್ನಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!