Uncategorized

ಇಂತ ಕಾರಣಕ್ಕೆಲ್ಲ ಮರ್ಡರ್ ಆದ್ರ ಮುಂದ ಗತಿ ಹ್ಯಾಂಗ್ರಿಪಾ!

ಮಹಾರಾಷ್ಟ್ರ:

ಚಲಿಸುತ್ತಿದ್ದ ರೈಲಿನಲ್ಲಿಯೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾದ ಘಟನೆ ಮುಂಬೈ ಲೋಕಲ್‌ ರೈಲಿನಲ್ಲಿ ನಡೆದಿದೆ.
ರೈಲು ಬಾಗಿಲು ಹಾಕುವ ವಿಚಾರಕ್ಕೆ ಹತ್ತಿಕೊಂಡಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ರೈಲು ಬಾಗಲು ಮುಚ್ಚುವ ವಿಚಾರಕ್ಕೆ ಇಬ್ಬರ ಮದ್ಯೆ ಹತ್ತಿಕೊಂಡ ಜಗಳ ಕಡೆಗೆ ಇಬ್ಬರಲ್ಲಿ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದ್ದು ಮುಂಬೈನ ಅಂಧೇರಿ ಮತ್ತು ಬೋರವೇಲಿ ಮಾರ್ಗ ಮದ್ಯೆ ಭೀಕರ ಘಟ‌ನೆ ನಡೆದಿದೆ.ಮೃತ ಯುವಕನನ್ನು ಮಯಾಂಕ್ ರಮೇಶ್ ಲೋಹಾರ್(22)ಎಂದು ಗುರುತಿಸಲಾಗಿದೆ.ಹರಿತವಾದ ಚಾಕುವಿನಿಂದ ಯುವಕನೋರ್ವ ಮಯಾಂಕ್ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ತಿವಿದಿದ್ದು ಹಲ್ಲೆಯ ತೀವ್ರತೆಗೆ ರಕ್ತದ ಮಡುವಿನಲ್ಲಿ ಬಿದ್ದು ಮಯಾಂಕ್ ಮೃತಪಟ್ಟಿದ್ದಾನೆ.ಕೊಲೆ ಮಾಡಿದ ಯುವಕ ರೈಲಿನಲ್ಲಿಯೇ ಚಾಕು ಹಿಡಿದು ಓಡಾಡಿದ ವಿಡಿಯೋ ರೈಲಿನಲ್ಲಿದ್ದ ಓರ್ವ ಪ್ರಯಾಣಿಕನ ಮೊಬೈಲ್ ನಲ್ಲಿ ಸೆರೆಯಾಗಿದೆ.ಕೊಲೆ ಮಾಡಿ ಸ್ಥಳದಿಂದ ಆರೋಪಿ ಪರಾರಿಯಾಗಿದ್ದು ಮಳೆ‌ ನೀರು ಒಳಗೆ ಬರುತ್ತೆ ಬಾಗಲಿ ಹಾಕು ಎಂದು ಯುವಕ ಹೇಳಿದ್ದ ಎನ್ನಲಾಗಿದೆ.ಇದೇ ವಿಚಾರಕ್ಕೆ ಇಬ್ಬರ ಮದ್ಯೆ ಜಗಳ ಹತ್ತಿಕೊಂಡು
ನೋಡ ನೋಡುತ್ತಿದ್ದಂತೆ ಚಾಕುವಿನಿಂದ ಇರಿದು ವ್ಯಕ್ತಿ ಪರಾರಿಯಾಗಿದ್ದಾನೆ.‌ಇನ್ನು ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂಧೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply

error: Content is protected !!