ಬೆಳಗಾವಿ:
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಇಂಡಾಲ್ಕೋ ಕಂಪನಿಯ ಕಾರ್ಮಿಕ ನೇಣಿಗೆ ಶರಣಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಆತ್ಮಹತ್ಯೆಗೆ ಶರಣಾಗಿರುವ ಕಾರ್ಮಿಕನನ್ನು
ಶಂಕರ ತಳವಾರ(26) ಎಂದು ಗುರುತಿಸಲಾಗಿದೆ.ಮೃತನು ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಯುವಕನಾಗಿದ್ದು, ಕಳೆದ ಆರು ವರ್ಷದಿಂದ ಇಂಡಾಲ್ಕೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಕಂಪನಿಯ ವಿರುದ್ಧ ಮೃತ ಶಂಕರ್ ತಳವಾರ್ ಅರೋಪಿಸಿದ್ದು ತನ್ನ ಸಾವಿಗೆ ಕಂಪನಿಯೇ ಕಾರಣ ಎಂದು ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾನೆ. ಅಲ್ಲದೆ ಕಂಪನಿಯ ಕಿರುಕುಳಕ್ಕೆ ಕಂಪನಿಯ ಆವರಣದಲ್ಲಿಯೇ ನೇಣಿನೆ ಶರಣಾಗಿದ್ದಾನೆ.
ವಾಟ್ಸಪ್ ಡೆತ್ ನೋಟ್ ಬರೆದಿರುವ ಶಂಕರ,ಹಲವು ವಿಚಾರಗಳನ್ನು ತನ್ನ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.
ನನ್ನ ಸಾವಿಗೆ ಇಂಡಾಲ್ ಕಂಪನಿ ಕಾರಣ ಯಾಕೆ ಅಂದ್ರೆ ಮೊದಲು ನಂದಿ ಕಾಂಟ್ರಾಕ್ಟ್ ನಲ್ಲೂ ನಮ್ಮ ಊರಿನ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಅವರ ಸಂಬಂಧಿಕರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಂಡರು. 10th & ಐಟಿಐ ಮೇಲೆ ಹುಡುಗರನ್ನು ಮೊದಲು ಕೆಲಸಕ್ಕೆ ತೆಗೆದುಕೊಳ್ತಿದ್ರು ಆದರೆ ಈಗ ಡಿಪ್ಲೋಮಾ ಪದವಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಕಂಪನಿಯವರು ಕೇಳುತ್ತಿದ್ದಾರೆ. ನಾವು 10th ಹಾಗೂ & ಐಟಿಐ ಮಾಡಿದ್ದೆವೆ.ಈಗ ನಾವು ಏನು ಮಾಡಬೇಕು ಹೇಳಿ ಎಂದು ಉಲ್ಲೇಖಿಸಿದ್ದಾನೆ.ಅಲ್ಲದೇ ಕಂಪನಿ ನಿರ್ಮಿಸಲು ನಮ್ಮ ಊರ ಜನರದ್ದು ಜಾಗ ಬಹಳ ಹೋಗಿದೆ.ಈವಾಗ ನಾವು ಏನು ಮಾಡಬೇಕು ಹೇಳಿ ಎಂದು ತನ್ನ ನೋವನ್ನು ಡೆತ್ ನೋಟ್ ನಲ್ಲಿ ಶಂಕರ್ ಉಲ್ಲೇಖಿಸಿದ್ದಾನೆ. ಇನ್ನಾದರೂ10th ಹಾಗೂ ಐಟಿಐ ಮಾಡಿದವರನ್ನು ಕೆಲಸಕ್ಕೆ ಭರ್ತಿ ಮಾಡಕೊಳ್ಳಿ ನಮ್ಮ ಊರ ಡೆವಲಪ್ಮೆಂಟ್ ಕಮೀಟಿ ಸರಿಯಿಲ್ಲ.ಮತ್ತು ರಾಮಾಚಾರಿ ಕಂಪನಿ ಯಲ್ಲಿ ಮಾಡತ್ತೇನೆ ಅಂತಾ 5 ಲಕ್ಷಾ ರೂಪಾಯಿ ತೆಗೆದುಕೊಂಡಿದ್ದಾಎ. ಅವನ ಬಳಿ ಹಣ ಕೇಳಿದರೆ ಕೊಡೂದಿಲ್ಲಾ ಅಂತಿದ್ದಾನೆ.ಎಂದು ಡೆತ್ ನೋಟ್ ಬರೆದು ನನ್ನ ತಾಯಿ & ತಂದೆ sorry ಕೇಳತೀನಿ.ನನ್ನ ಕ್ಷಮಿಸಿ ಬಿಡಿ ಅಪ್ಪ ಎಂದು ವಾಟ್ಸಪ್ ಡೆತ್ ನೋಟ್ ಬರೆದಿದ್ದಾನೆ.ಇನ್ನು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ನಾಲ್ಕು ಕೆಎಸ್ಆರ್ ಪಿ ತುಕಡಿ ಸೇರಿದಂತೆ ನೂರಾರು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.










