Uncategorized

ಉರಗ ರಕ್ಷಿಸಿದ ಪ್ರೀತಿ ಸವಡಿ ಈ ಕುಟುಂಬಕ್ಕೆ ಹಾವು ರಕ್ಷಣೆ ಮಾಡೋದು ಒಂದು ಸೇವೆ

ಬೆಳಗಾವಿ: ನಗರದ ಸಾಹಿತ್ಯ ಭವನದ ಹಿಂಭಾಗ ಇರುವ ಸಿದ್ರಾಮ್ ಬೋಗೂರು ಅವರ ಮನೆಯಲ್ಲಿ ಅಡಗಿದ್ದ ಕೇರೆ ಹಾವನ್ನು ಉರಗ ರಕ್ಷಕಿ ಪ್ರೀತಿ ಸವಡಿ ಹಾಗೂ ಅವರ ತಂದೆ ಚಂದ್ರಶೇಖರಯ್ಯ ಸವಡಿಯವರು ಕೇರೆ ಹಾವನ್ನು ರಕ್ಷಿಸಿದರು. ಸಂಜೆಯ ವೇಳೆ ಮನೆಯೊಳಗೆ ಬಂದಿದ್ದ ಕೇರೆ ಹಾವು ಕಂಡು ಬೋಗುರು ಕುಟುಂಬಸ್ಥರು ಹೆದರಿದ್ದರು. ಕೂಡಲೇ ಮಾಧ್ಯಮದ ಗೆಳೆಯರು ಸವಡಿಯವರಿಗೆ ಕರೆ ಮಾಡಿ ಹಾವು ಬಂದಿರುವ ವಿಚಾರ ತಿಳಸಿದ ತಕ್ಷಣ ಪ್ರೀತಿ ಸವಡಿ ಹಾಗೂ ಚಂದ್ರಶೇಖರಯ್ಯ ಸವಡಿಯವರು ಹಾವು ರಕ್ಷಿಸಿದರು. ಇನ್ನು ಹಾವು ರಕ್ಷಣೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೀತಿ ಸವಡಿಯವರು ಹಾವುಗಳ ಲಕ್ಷಣಗಳುಣ ಹಾಗೂ ಅವುಗಳು ಅಟ್ಯಾಕ್ ಮಾಡುವ ರೀತಿ ಹಾಗೂ ಹಾವುಗಳು ಮನೆಯಲ್ಲಿ ಬಂದಾಗ ಹೇಗೆ ಅವುಗಳೊಂದಿಗೆ ನಡೆದುಕೊಳ್ಳಬೇಕು ಎಂದು ಹೇಳಿದರು.ಇನ್ನು ಖ್ಯಾತ ಯೂಟ್ಯೂಬರ್ ಆಗಿರುವ ಪ್ರೀಯಾ ಸವಡಿಯವರ ಸಹೋದರಿಯಾದ ಪ್ರೀತಿ ಸವಡಿಯವರು ಹಾಗೂ ಅವರ ತಂದೆ ಹಾಗ ಚಂದ್ರಶೇಖರಯ್ಯ ಅವರು ಈವರೆಗೆ ಒಟ್ಟು ಐದು ಸಾವಿರಕ್ಕೂ ಹೆಚ್ಚು ವಿವಿಧ ತಳಿಯ ಹಾವುಗಳನ್ನು ರಕ್ಷಿಸಿದ್ದಾರೆ. ಇನ್ನು ಹಾವುಗಳನ್ನು ಹಿಡಿಯಲು ಸವಡಿ ಕುಟುಂಬ ಯಾವುದೇ ಗೌರವ ಧನ ಪಡೆಯೊಲ್ಲ ಎನ್ನುವುದು ವಿಶೇಷವಾಗಿದ್ದು ಇದನ್ನೊಂದು ಸೇವೆಯ ರೀತಿಯಲ್ಲಿ ಸವಡಿ ಕುಟುಂಬ ಮಾಡುತ್ತಿರುವುದು ಗಮನಾರ್ಹ ಸಂಗತಿ.

TV24 News Desk
the authorTV24 News Desk

Leave a Reply