ಜಿಲ್ಲೆಬೆಳಗಾವಿ

ಸಾಲಿ ಕಲಸೋ ಮಾಸ್ತರಾ ಅಂದ್ರ…!

ಬೆಳಗಾವಿ:

ಹರ ಮುನಿದರೆ ಗುರು ಕಾಯುವ ಗುರು ಮುನಿದರೇ ಯಾರು ಕಾಯುವರು ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ಶಿಕ್ಷಕ ಗುರುವಿನ ಸ್ಥಾನಕ್ಕೆ ಅಪಚಾರ ಮಾಡುವ ಕೆಲಸ ಮಾಡಿದ್ದು ಸಿಕ್ಕಿ ಬಿದ್ದು ಜನರ ಕೈಯಿಂದ ಧರ್ಮದೇಟು ತಂದಿದ್ದಾನೆ. ಅಷ್ಟಕ್ಕೂ ಆ ಶಿಕ್ಷಕ ಮಾಡಿದ ಆ ಘನಕಾರ್ಯವೇನು ಯಾರಾತ ಅಂತೀರಾ ಈ ಸ್ಟೋರಿ ನೋಡಿ‌..

ಶಾಲೆಯಲ್ಲಿಯೇ ಶಿಕ್ಷಣಿಗೆ ಧರ್ಮದೇಟು.. ಕೈ ಮುಗಿದು ನಂದು ತಪ್ಪಾಗಿದೆ ಅಂತಿರೋ ಶಿಕ್ಷಕ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಪೊಲೀಸಲು ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮ ಒಂದರ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹೀಗೆ ಜನರಿಂದ ಧರ್ಮಟೇಟು ತಿಂದು ಕೈ ಮುಗಿದು ನಿಂತಿರುವ ಈ ಶಿಕ್ಷಕ ಮಹಾಶಯನ ಹೆಸರು ಶ್ರೀಶೈಲ ಕುಂಬಾರ ಅಂತ. ಈತ ಕಳೆದ 18 ವರ್ಷಗಳಿಂದ ಇದೇ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ಮಾಡುತ್ತಿದ್ದಾನೆ. 10 ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ( ಬಾಲಕರಿಗೆ) ಈತ ನಿಮ್ಮನ್ನು 10ನೇ ತರಗತಿಯಲ್ಲಿ ಪಾಸ್ ಮಾಡಿಸುತ್ತೆನೆ ಎಂದು ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಇಂದು ಶಾಲೆಗೆ ಬಂದ ಪೋಷಕರು ಶಿಕ್ಷಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು.

Vo: ಶ್ರೀಶೈಲ ಶಾಲೆಯಲ್ಲಿರುವ ಐವರು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು ವಿದ್ಯಾರ್ಥಿಗಳಿವೆ ಪಾಸ್ ಮಾಡುವ ಆಮಿಷ ಒಡ್ಡಿ ತನಗೆ ಬೇಕಾದಂತೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸದ್ಯ ಶಾಲಾ ಶಿಕ್ಷಕನ ಮೇಲೆ ಬಂದಿದೆ. ಪೋಷಕರು ಶಾಲೆಯ ಮುಂದೆ ಜಮಾಯಿಸಿ ಶಿಕ್ಷಕನಿಗೆ ಧರ್ಮದೇಟು ನೀಡಿ ಗಲಾಟೆ ಮಾಡಿದ್ದರಿಂದ ಶಾಲೆಗೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಶಿಕ್ಷಕ ಶ್ರೀಶೈಲನನ್ನು ವಶಕ್ಕೆ ಪಡೆದರು. ಇನ್ನು ಸುದ್ದಿ ತಿಳದ ಚಿಕ್ಕೋಡಿ ಉಪನಿರ್ದೇಶಕ ಸೀತಾರಾಮ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಕ್ಷಕರು ಹಾಗೂ ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಒ ಕಡೆಯಿಂದ ವರದಿ ಕೇಳಿದರು. ಅಲ್ಲದೇ ತಕ್ಷಣಕ್ಕೆ ಜಾರಿಗೆ ಬರುವಂತೆ ಶಿಕ್ಷಕ ಶ್ರೀಶೈಲನನ್ನು ಅಮಾನತು ಆದೇಶ ಮಾಡಿದರು.

ಒಟ್ಟಿನಲ್ಲಿ ಅಕ್ಷರಂ ಕಲಿಸಿದಾತಂ ಗುರು ಎಂಬ ಮಾತಿಗೆ ಈ ಶ್ರೀಶೈಲ ತದ್ವಿರುದ್ದದಂತಿದ್ದು ಸದ್ಯ ಪೋಷಕರು ಈತನ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ನೀತಿ ಪಾಠ ಮಾಡುವುದನ್ನು ಬಿಟ್ಟು ಕಾಮಪಾಠ ಮಾಡಲು ಹೋಗಿ ಶಿಕ್ಷಕ ಧರ್ಮದೇಟು ತಿಂದು ಇಂಗು ತಿಂದ ಮಂಗನಹಾಗಾಗಿದ್ದಾನೆ.

TV24 News Desk
the authorTV24 News Desk

Leave a Reply