ಜಿಲ್ಲೆಬೆಳಗಾವಿರಾಜಕೀಯ

ರಮೇಶ ಜಾರಕಿಹೊಳಿ ಮೇಲೆ ಗಂಭೀರ ಆರೋಪ ಮಾಡಿದ ಮಹಾಂತೇಶ ಕಡಾಡಿ

ಬೆಳಗಾವಿ:

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಕಾಕ ಕ್ಷೇತ್ರದ ಪರಾರ್ಜಿತ ಅಭ್ಯರ್ಥಿ ಮಾಹಾಂತೇಶ ಕಡಾಡಿ
ಶಾಸಕ ರಮೇಶ ಜಾರಕಿಹೊಳಿ ಮೇಲೆ ಗಂಭೀರ ಆರೋಪ ಮಾಡಿದರು.ಸೌಭಾಗ್ಯಲಕ್ಷ್ಮೀ ಶುಗರ್ಸ್ ರೆಡಿ ಮಾಡುವಾಗ 9 ಪಿಕೆಪಿಎಸ್ ನಕಲಿ ಸೃಷ್ಟಿ ಮಾಡಿದ್ದಾರೆ.ತಮ್ಮ ಬೇನಾಮಿ ಹಣವನ್ನು ಸೌಭಾಗ್ಯಲಕ್ಷ್ಮೀ ಶುಗರ್ಸ್ ಗೆ ಹೂಡಿಕೆ ಮಾಡಿ
8 ಪರ್ಸಂಟ್ ಶೇರ್ ಇನ್ನೂ ಈ ಪಿಕೆಪಿಎಸ್ ಹೆಸರಿನ ಮೇಲಿದೆ.
ಆ ಲಿಸ್ಟ್ ನಲ್ಲಿರುವ ಪಿಕೆಪಿಎಸ್ಗಳು ಊರಲ್ಲಿವೆ ಅಂತ ಜನರಿಗೆ ಗೊತ್ತೆ ಇಲ್ಲ ಅದರ ಮೇಲೆ ರೈತರಿಗೆ ಸಾಲವನ್ನೂ ಕೊಡ್ತಿಲ್ಲ. ಇಡಿ ತನಿಖೆಯೂ ಸಹ ಇವೆ ನಾವು ಡಿಸಿಸಿ ಬ್ಯಾಂಕ್ ಗೆ ಪತ್ರ ಸಹ ಬರೆದರೂ ಇನ್ನೂ ಡಿಸಿಸಿ ಬ್ಯಾಂಕ್ ಉತ್ತರ ಕೊಡ್ತಿಲ್ಲ ಇವುಗಳನ್ನು ವೋಟ್ ಗಳನ್ನಾಗಿ ಮಾಡಿ ಗೆಲ್ಲಲು ಬಳಕೆ ಮಾಡಿಕೊಳ್ತಿದ್ದಾರೆ.
ಪಿಕೆಪಿಎಸ್ ಗಳು ಆರ್ ಬಿ ಐ ಗೈಡ್ ಲೈನ್ಸ್ ಒಳಗಡೆ ಬರೋದಿಲ್ಲ.
ಹೀಗಾಗಿ ತಮ್ಮ ಬೇನಾಮಿ ಹಣವನ್ನು ಹಾಕಿ ಫ್ಯಾಕ್ಟರಿಗಳನ್ನು ಕಟ್ಟಿಕೊಳ್ಳಲಾಗ್ತಿದೆ. ಇದಕ್ಕೆ ಹಗರಣದಲ್ಲಿ ಹಗರಣ ಅಂತಾರೆ.
ಸೌಭಾಗಲಕ್ಷ್ಮೀ ಕಾರ್ಖಾನೆ ಎನ್ ಸಿ ಎಲ್ ಡಿ ಗೆ ಹೋಗಿ ಅದರಲ್ಲಿ ಇನ್ನೊಂದು ಬೇನಾಮಿ ಕಂಪನಿ
ಹೆಸರು‌ ನರಸಿಂಹ ಲಕ್ಷ್ಮೀ ಕಂಪನಿ ಬಂತು ಮೊನ್ನೆ ಶಾಸಕರು ತಪ್ಪು ಹೆಸರು ಕೊಟ್ಟರು.ನರಸಿಂಹ ಲಕ್ಷ್ಮೀ ಕಂಪನಿಗೆ ತಪ್ಪು ಹೆಸರು ಕೊಟ್ಟರು.
ಆರು ತಿಂಗಳ ಕಂಪನಿ ಸೌಭಾಗ್ಯಲಕ್ಷ್ಮೀ ಶುಗರ್ಸ್ ನನ್ನ 160 ಕೋಟಿಗೆ ತೆಗೆದುಕೊಂಡಿದೆ.
ಅದನ್ನ ಬ್ಯಾಂಕಿನವರು ಪ್ರಶ್ನೆ ಮಾಡಿದರೆ 330 ಕೋ ವ್ಯಾಲ್ಯುವೇಷನ್ ಮಾಡ್ತಾರೆ.
ಇದು ಸಾಮಾನ್ಯ ಜನರಿಗೂ ಸಹ ಗೊತ್ತಾಗುತ್ತೆ ಇದು ಬ್ಯಾಂಕ್ ಮುಳುಗಿಸುವ ಹಗರಣವೆಂದು ಎಂದು ಮಹಾಂತೇಶ ಕಡಾಡಿ ಆರೋಪಿಸಿದರು.

TV24 News Desk
the authorTV24 News Desk

Leave a Reply