ಜಿಲ್ಲೆಬೆಳಗಾವಿ

ಬೆಳಗಾವಿಯಲ್ಲಿ ಕಳೆಗಟ್ಟಿದ 79 ನೇ ಸ್ವಾತಂತ್ರ್ಯ ದಿನಾಚರಣೆ!

ಬೆಳಗಾವಿ:

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ 79 ನೇ ಸ್ವಾತಂತ್ರ್ಯ ದಿನದ ಸಂಭ್ರಮ ಕಳೆಗಟ್ಟಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ‌ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧ್ವಾಜಾರೋಹಣ ನೆರವೇರಿಸಿದರು. ಸಚಿವ ಸತೀಶ ಜಾರಕಿಹೊಳಿಯವರಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಶಾಸಕ ಅಶೀಪ್ ಸೇಠ್, ಸಿಒಒ ರಾಹುಲ್ ಶಿಂಧೆ,ಪೊಲೀಸ್ ನಗರ ಆಯುಕ್ತ ಭೂಷಣ್ ಭೋರಸೆ ಸಾಥ್ ನೀಡಿದರು.ಇನ್ನು 79ನೇ ಸ್ವಾತಂತ್ರ್ಯೋತ್ಸವದಲ್ಲಿ ಪಥಸಂಚಲನ ಎಲ್ಲರ ಗಮನ ಸೆಳೆಯಿತು.ಪೊಲೀಸರು,ಅಗ್ನಿಶಾಮಕದಳ, ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿಯರ ಜೊತೆಗೆ ಈ ವಾರಿ ವಿಶೇಷ ಎಂಬಂತೆ ಪೌರಕಾರ್ಮಿಕರೂ ಸಹ ಪಥಸಂಚಲನದಲ್ಲಿ ಭಾಗಿಯಾಗಿ ರಾಷ್ಟ್ರ ಧ್ವಜಕ್ಕೆ ಗೌರವ ಸಮರ್ಪಿಸಿದರು. ಇನ್ನು ಮಹೇಶ್ವರ‌ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಧ್ವಜಕ್ಕೆ ಗೌರವ ಸಮರ್ಪಣೆ ಮಾಡಿದ್ದು ವಿಶೇವಾಗಿತ್ತು.

TV24 News Desk
the authorTV24 News Desk

Leave a Reply