ಬೆಳಗಾವಿ:
ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿದ್ದ ಮಳೆ ಅಧ್ಯ ಗ್ಯಾಪ್ ಕೊಟ್ಟಿದ್ದರಿಂದ ರೈತಲು ಬೆಳೆ ಹಾನಿಯ ಆತಂಕದಿಂದ ತಪ್ಪಿಸಿಕೊಳ್ಳುವಷ್ಟದಲ್ಲಿ ಸಧ್ಯ ಜಿಲ್ಲೆಯ ರೈತರಿಗೆ ಈಗ ದೊಣ್ಣೆ ಹುಳು ಭಾದೆ ಶುರುವಾಗಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆದ ವಿವಿಧ ಬೆಳೆಗೆ ದೊಣ್ಣೆ ಹುಳು ಹತ್ತಿಕೊಂಡು ರೈತರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆದ ಕ್ಯಾಬೇಜ್,ಮೆಕ್ಕೆಜೋಳ,ಕಬ್ಬು, ಗಜ್ಜರಿ, ಕೊತ್ತಂಬರಿ, ಸೇರಿದಂತೆ ವಿವಿಧ ಬೆಳೆಗೆ ದೊಣ್ಣೆಹುಳುಭಾದೆ ಶುರುವಾಗಿದೆ. ಬೆಳೆಗಳ ಬೇರುಗಳನ್ನೆ ತಿಂದು ಹಾಕುವ ದೊಣ್ಣೆ ಹುಳು ಭಾದೆಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ದೊಣ್ಣೆ ಹುಳು ನಿಯಂತ್ರಣಕ್ಕೆ ಸಾಕಷ್ಟು ಕೀಟನಾಶಕ ಉಪಯೋಗಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ದೊಣ್ಣೆ ಹುಳು ಭಾದೆಯ ಕುರಿತು ರೈತರು ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹಲವಾರು ಬಾರಿ ಜಮೀನಿಗೆ ಬಂದು ಪರಿಶೀಲನೆ ಮಾಡುವಂತೆ ರೈತರು ಮನವಿ ಮಾಡಿಕೊಂಡರೂ ಸಹ ಕೃಷಿ ಇಕಾಖೆಯ ಅಧಿಕಾರಿಗಳು ಸೌಜನ್ಯಕ್ಕೂ ಸಹ ರೈತರ ಗದ್ದೆಗಳಿಗೆ ಬಂದು ಪರಿಶೀಲನೆ ಮಾಡುವ ಮಸನು ಮಾಡ್ತಿಲ್ಲ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ ಅಕ್ರೋಶ ಹೊರ ಹಾಕುತ್ತಿದ್ದಾರೆ. ಸಧ್ಯ ನಾಲ್ಕೈದು ಬೆಳೆಗಳನ್ನು ದೊಣ್ಣೆ ಹುಳು ತಿಂದು ಹಾಕುತ್ತಿದ್ದರು ಸಾವಿರಾರು ರೂಪಾಯಿ ಬಿತ್ತನೆಗಾಗಿ ರೈತರು ಖರ್ಚು ಮಾಡಿದ್ದು ನೀರಲ್ಲಿ ಹೋಮ ಮಾಡಿದ ರೀತಿಯಾಗಿದೆ. ಇನ್ನಾದರೂ ಅಧಿಕಾರಿಗಳು ರೈತರ ಕರೆಗೆ ಓಗೊಟ್ಟು ರೈತರ ಸಂಕಷ್ಟ ಆಲಿಸ್ತಾರಾ ಕಾದು ನೋಡಬೇಕಿದೆ.






