ಜಿಲ್ಲೆಬೆಳಗಾವಿರಾಜಕೀಯ

ಮೊನ್ನೆ ಅಲ್ಲಿ ನಿನ್ನೆ ಇಲ್ಲಿ ನಾಳೆ ಮತ್ತಿನ್ನೆಲ್ಲಿ? ನಿರ್ದೇಶಕರೆ ಆಕ್ಚೂಲಿ ಎನ್ ನಿಮ್ ಉದ್ದೇಶ? 

ಬೆಳಗಾವಿ:

ಮೊನ್ನೆ ಮೊನ್ನೆಯಷ್ಟೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನೀವೆ ನಡೆಸಿಕೊಂಡು ಹೋಗಬೇಕು ಎಂದು ರಮೇಶ್ ಕತ್ತಿ ಹಾಗೂ ಎಬಿ ಪಾಟೀಲ್ ಮೊರೆ ಹೋಗಿದ್ದ ಕಾರ್ಖಾನೆಯ ನಿರ್ದೇಶಕರು ಸಡನ್ ಯೂಟರ್ನ್ ಹೊಡೆದಿದ್ದಾರೆ. ಈ ಮೊದಲು ಅಣ್ಣಾಸಾಹೇಬ್ ಜೊಲೆಯವರ ಮೊರೆ ಹೋಗಿದ್ದ ಕಾರ್ಖಾನೆಯ ನಿರ್ದೇಶಕರು ನಂತರ ಅದ್ಯಾವ ಮನಸ್ಥಾಪ ಆಯ್ತೋ ಗೊತ್ತಿಲ್ಲ. ಸಡನ್ ಆಗಿ ರಮೇಶ ಕತ್ತಿ ಹಾಗೂ ಮಾಜಿ ಸಚಿವ ಎಬಿ ಪಾಟೀಲರ ಮೊರೆ ಹೋಗಿದ್ದರು. ಅವರಿಬ್ಬರೂ ಸೇರಿಕೊಂಡು ಕಾರ್ಖಾನೆಯ ನಿರ್ದೇಶಕರ ಸಹಿತ ಸುದ್ದಿಗೋಷ್ಠಿ ನಡೆಸಿ ಕಾರ್ಖಾನೆಯನ್ನು ನಡೆಸಿಕೊಂಡು ಹೋಗುತ್ತೆವೆ ಅಂತ ಹೇಳಿದ್ದರು.ಈಗ ಬದಲಾದ ಸನ್ನಿವೇಶದಲ್ಲಿ ಮತ್ತೆ ನಿರ್ದೇಶಕರು ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ ನೇತೃತ್ವ ಬಯಸಿ ಅವರ ಬಳಿ ಹೋಗಿದ್ದು. ಸಂಸ್ಥೆಯ ನಿರ್ದೇಶಕರ ಜೊತೆಗೆ ಮಾತುಕತೆ ನಡೆಸಿದ ಅಣ್ಣಾಸಾಹೇಬ್ ಜೊಲ್ಲೆ ತಮ್ಮ ಬೀರೇಶ್ವರ ಸಂಸ್ಥೆಯಿಂದ ಅಗತ್ಯ ಆರ್ಥಿಕ ನೆರವನ್ನು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ವಾಲಚಂದ್ರ ಜಾರಕಿಹೊಳಿ‌ ಹಾಗೂ ತಾವು ಸೇರಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವುದಾಗಿ ಹೇಳಿಕೆ ನೀಡಿದ್ದಾರೆ.ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಎಲ್ಲ ಬೆಳವಣಿಗೆಗಳನ್ನು ಜನ ಸೂಕ್ಷ್ಮವಾಗಿ ನೋಡುತ್ತಿದ್ದು ನಿರ್ದೇಶಕರ ನೌಟಂಕಿ ಆಟಗಳು ಇನ್ನು ಏನೇನಿವೆ ಇವರು ಯಾವಾಗ ಎಲ್ಲಿ ಯಾರ ಪರವಾಗಿ ವಿರೋಧವಾಗಿ ಹೊರಳಾಡುತ್ತಾರೋ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

TV24 News Desk
the authorTV24 News Desk

Leave a Reply