ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಒಂದು ಜೀವದ ಬೆಲೆ ಕೇವಲ 500 ರೂಪಾಯಾ!ಎಂತೆಂಥವರಿದ್ದಾರೆ ಮಾರಾಯಾ?

ಬೆಳಗಾವಿ:

ಜಗತ್ತಿನಲ್ಲಿ ಎಂಥೆಂತವರಿದ್ದಾರೆ ನೋಡಿ ಇಲ್ಲೊಬ್ಬ ಸ್ನೇಹಿತ ಐನೂರು ರೂಪಾಯಿಗಾಗಿ ತಾಯಿ ಸಮ್ಮುಖದಲ್ಲಿಯೇ ತನ್ನ ಸ್ನೇಹಿತನ ಕೊಲೆ ಮಾಡಿದ ಘಟನೆ ನಡೆದಿದೆ.‌ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಭಿಭತ್ಸ ಕೃತ್ಯ ನಡೆದಿದ್ದು ಘಟನೆಯಿಂದ ಇಡೀ ಬೆಳಗಾವಿಯ ಯಳ್ಳೂರು ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಯಳ್ಳೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲೆ(45) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು ಆರೋಪಿಗಳಾದ ಮಿಥುನ್ ಕುಬಚಿ,ಮನೋಜ್ ಇಂಗಳೇ ಎಂಬುವವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗುಜರಿ ಸಾಮಗ್ರಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳವಾಗಿ ಮನಸ್ತಾಪಗಳಾಗಿತ್ತು ಎನ್ನಲಾಗಿದೆ. ಮೃತ ಹುಸೇನ್ ಕೊಲೆ ಆರೋಪಿಗಳಾದ ಮಿಥುನ್ ಮತ್ತು ಮನೋಜ್ ಗೆ ಐನೂರು ರೂ ಕೊಡಬೇಕಿತ್ತು ಎನ್ನಲಾಗಿದೆ. ಹಣ ಕೇಳಲು ಹುಸೇನ್ ಮನೆಗೆ ಇಬ್ಬರೂ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಮೂವರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಹುಸೇನ್ ಹೊಟ್ಟೆಯ ಭಾಗಕ್ಕೆ ಕೈಯಿಂದ ಇಬ್ಬರೂ ಆರೋಪಿಗಳು ಗುದ್ದಿದ್ದಾರೆ. ಹೊಟ್ಟೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದದ್ದರಿಂದ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದ. ಗಾಯಗೊಂಡ ಹುಸೇನ್ ನನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು‌. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಹುಸೇನ್ ಸಾವನ್ನಪ್ಪಿದ್ದಾನೆ.ಇನ್ನು ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

TV24 News Desk
the authorTV24 News Desk

Leave a Reply

error: Content is protected !!