Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಬೆಳಗಾವಿ ವಿಟಿಯು ಹತ್ತಿರ ಬೆಂಕಿ ಅವಘಡ  ಹೊತ್ತುಉರಿದ ಅರಣ್ಯ ಪ್ರದೇಶ

ಬೆಳಗಾವಿ: ಜಾಂಬೋಟಿ ರಸ್ತೆಗೆ ಹೊಂದಿಕೊಂಡಿರುವ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಬಳಿಯ ಅರಣ್ಯ ಪ್ರದೇಶದ ಅಪಾರ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿಯ ಕೆನ್ನಾಲಗೆ ಯಾವ ಪರಿ ಹರಡಿತ್ತೆಂದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದವರು ಇದನ್ನು ಕಂಡು ಹೌಹಾರಿದರು. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು ಅನೇಕ ಜನ ತಮ್ಮ ಕೈಯ್ಯಲ್ಲಿ ಸಾಧ್ಯವಾದಷ್ಟು ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ ಆಗಲೇ ಅದು ವ್ಯಾಪಕವಾಗಿ ಹರಡಿದ್ದರಿಂದ ಕೈಮೀರಿ ಹೋಗಿತ್ತು.
ಬೇಸಿಗೆ ಅವಧಿ ಆರಂಭವಾಗುತ್ತಿದ್ದಂತೆ ಸಂಭವನೀಯ ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ನೂರಾರು ಸಾವಿರಾರು ವಾಹನಗಳು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಇಂಥ ಘಟನೆಯಾದರೆ ದಟ್ಟಾರಣ್ಯದ ಒಳಗೆ ನಡೆಯುವ ಅನಾಹುತಗಳನ್ನು ತಡೆಯಲು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ.
TV24 News Desk
the authorTV24 News Desk

Leave a Reply

error: Content is protected !!