Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ವರುಣನರ್ಭಟ ರಾತ್ರಿಯೆಲ್ಲ ಮರದಲ್ಲಿ ಕುಳಿತ ವ್ಯಕ್ತಿ

ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದ್ದು, ವ್ಯಕ್ತಿಯೊಬ್ಬ ಪ್ರವಾಹಕ್ಕೆ ಸಿಲುಕಿ ರಾತ್ರಿಯಿಡೀ ಮರದಲ್ಲೆ ಕಾಲಕಳೆದಿದ್ದಾನೆ. ವರುಣಾ ನದಿಯ ಪಾತ್ರದಲ್ಲಿ ಪ್ರವಾಹಕ್ಕೆ ಸಿಲುಕಿದ್ದನು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ವರುಣಾ ನದಿ ಆರ್ಭಟ ಜೋರಾಗಿದೆ.
ಗಡಿಭಾಗದ ಮಾಂಗ್ಲೆ-ಕಾಖೆ ಸೇತುವೆ ಬಳಿ ಘಟನೆ ನಡೆದಿದೆ. ವ್ಯಕ್ತಿ ಪ್ರವಾಹದ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಲದೇವಾಡಿ ಗ್ರಾಮದ 58 ವರ್ಷದ ಬಜರಂಗ ಕಾಮಕರ್ ನೀರಿಗೆ ಬಿದ್ದಿದ್ದವರಾಗಿದ್ದಾರೆ. ಸುಮಾರು 700 ಮೀಟರ್​ನಷ್ಟು ನೀರು ಹರಿಯುತ್ತಿತ್ತು, ಕಾಮಕರ್​​ ಮರದ ಕೊಂಬೆ ಹಿಡಿದುಕೊಂಡು ಇಡೀ ರಾತ್ರಿ ಕುಳಿತಿದ್ದ. ಬೆಳಗ್ಗೆ ಹೊಲಕ್ಕೆ ಬಂದವರು ಕಾಮಕರ್​ ಗಮನಿಸಿದ್ದರು, ತಕ್ಷಣ ರಕ್ಷಣೆಗೆ NDRF ಟೀಂ ಧಾವಿಸಿ ಬಂದಿದ್ದು, ಎನ್​ಡಿಆರ್​​ಎಫ್​ ದೋಣಿಯ ಸಹಾಯದಿಂದ ರಕ್ಷಿಸಿ ಕರೆತಂದಿದ್ದಾರೆ. ರಕ್ಷಣಾ ಕಾರ್ಯಕ್ಕೆ ಸ್ಥಳೀಯ ಪೊಲೀಸರು ಸಾಥ್​​​ ನೀಡಿದರು.

TV24 News Desk
the authorTV24 News Desk

Leave a Reply

error: Content is protected !!