ಕ್ರೈಂಜಿಲ್ಲೆಬೆಳಗಾವಿ

ಮಸೀದಿಯಲ್ಲಿಯೇ ಅಪ್ರಾಪ್ತೆಯ ಮೇಲೆ ಎರಗಿದ ಕಾಮಿ ಅಂದರ್!

ಬೆಳಗಾವಿ:

ಅಪ್ರಾಪ್ತ ಬಾಲಕಿಯ ಮೇಲೆ ಪವಿತ್ರವಾದ ಮಸೀದಿಯಲ್ಲಿ ಅತ್ಯಾಚರ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌. ಠಾಣಾ ವ್ಯಾಪ್ತಿಯ ಮಸೀದಿ ಒಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕಳೆದ ಎರಡು ವರ್ಷಗಳ ಹಿಂದೆ ಅತ್ಯಾಚಾರ ನಡೆದಿತ್ತು ಎನ್ನಲಾಗಿದೆ. ಆದರೆ ಅಪ್ರಾಪ್ತ ಬಾಲಕಿಯ ತಂದೆ ತಾಯಿ ಮಾನಕ್ಕೆ ಅಂಜಿ ದೂರು ದಾಖಲಿಸಿರಲಿಲ್ಲ. ಆದರೆ ಸಾಮಾಜಿಕ ಹೋರಾಟಗಾರ ಹಿಂದೂ ಕಾರ್ಯಕರ್ತ ಪುನೀತ ಕೆರೆಹಳ್ಳಿ ಗಮನಕ್ಕೆ ನಡೆದ ಘಟನೆಯನ್ನು ಬಾಲಕಿಯ ತಂದೆ ಗಮನಕ್ಕೆ ತಂದಾಗ ಪುನೀತ್ ಕರೆಹಳ್ಳಿ ತಮ್ಮ ಎಕ್ಸ್ ಖಾತೆಯಲ್ಲಿ ಬಾಲಕಿಯ ಪೋಷಕರಿಗೆ ನ್ಯಾಯ ಕೊಡಿಸಿ ಎಂದು ಪೋಸ್ಟ್ ಮಾಡಿದ್ದಲ್ಲರೆ ಮಸೀದಿಯಲ್ಲಿ ಸೆರೆಸಿಕ್ಕಿದ್ದ ಸಿಸಿಟಿವಿ ವಿಡಿಯೋವನ್ನೂ ಸಹ ಪೋಸ್ಟ್ ಮಾಡಿದ್ದರು. ಅದೇ ಪೋಸ್ಟ್ ಅನ್ನು ಪೊಲೀಸರು ಸಾಕ್ಷಿಯಾಗಿರಿಸಿಕೊಡು ಬಾಲಕಿಯ ಪೋಷಕರನ್ನು ಮೊದಲು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದು ಇಷ್ಟು ದಿನಗಳಾದರೂ ಸಹ ದೂರು ಯಾಕೆ ನೀಡಿಲ್ಲ ಎಂದು ಪೊಲೀಸರು ಪ್ರಶ್ನೆ ಮಾಡಿದಾಗ ತಮ್ಮ ಅಪ್ರಾಪ್ತ ಬಾಲಕಿಯ ಭವಿಷ್ಯದ ಕುರಿತು ಆತಂಕಗೊಂಡು ದೂರು ನೀಡಿಲ್ಲ ಎಂದು ಪೊಲೀಸರ ಮುಂದೆ‌ ಹೇಳಿಕೆ‌ ನೀಡಿದ್ದಾರೆ ಎನ್ನಲಾಗಿದೆ. ಸಧ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋವನ್ನೆ ಸಾಕ್ಷಿಯಾಗಿಟ್ಟುಕೊಂಡು ತಂಡಗಳನ್ನು ‌ರಚನೆ ಮಾಡಿ ಪೊಲೀಸರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಸ್ಥಳೀಯ ಸಿಡಿಪಿಒ ಕಡೆಯಿಂದ ದೂರು ದಾಖಲಿಸಿಕೊಂಡಿರುವ ಮುರುಗೋಡ ಪೊಲೀಸರು ಮಸೀದಿಯಲ್ಲಿ ಅಪ್ರಾಪ್ತೆಯ ಮೇಲೆ ಎರಿದ್ದ ಕಾಮುಕನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.‌ಈ ಕುರಿತು ಮುರುಗೋಡ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಖಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply