Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಬೆಳಿಗ್ಗೆ ತಂದೆ ಸಾವು: ಎಸ್ ಎಸ್ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಹುಕ್ಕೇರಿ : ತಾಲೂಕಿನ ಕೇಸ್ತಿ ಸರಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಮಿದ್ದತ್ ಅಬ್ದುಲರಜಾಕ್ ಸನದಿ ಇವಳ ತಂದೆ ಅಬ್ದುಲರಜಾಕ್ ಸನದಿ ಶುಕ್ರವಾರ ಬೆಳಗಿನ ಜಾವ 2.30ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದರಿಂದ ಆತನ ಮಗಳು ಮಿದ್ದತ್ ಇಂದು ಎಸ್ ಎಸ್ಎಲ್ ಸಿ ಪರೀಕ್ಷೆ ಬರೆಯಲು ಹಿಂದೆಟು ಹಾಕಿದಳು.ಕೂಡಲೆ ವಿಷಯ ತಿಳಿದ ಹುಕ್ಕೇರಿ ಬಿ ಇ ಓ ಮೋಹನ ದಂಡಿನ ಮತ್ತು ಶಿಕ್ಷಕರು ವಿದ್ಯಾರ್ಥಿ ಮನೆಗೆ ತೆರಳಿ ವಿದ್ಯಾರ್ಥಿನಿಯ ಮನವೊಲಿಸಿ, ಇಂದು ಪರೀಕ್ಷಗೆ ಹಾಜರಾಗುವಂತೆ ಮಾಡಿದರು. ವಿದ್ಯಾರ್ಥಿನಿಗೆ ಧೈರ್ಯ ಹೇಳಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು..
ಬಿಸಿಯೂಟ ಅಧಿಕಾರಿಗಳಾದ ಶ್ರೀಮತಿ ಎಸ್.ಪಿ‌.ಹಲಕಿ, ಪಿ‌.ಡಿ.ಪಾಟೀಲ, ಶಿವಾನಂದ ಗುಂಡಾಳಿ, ಕೇಂದ್ರದ ಮುಖ್ಯ ಆಧೀಕ್ಷಕ ಪಿ.ಪಿ.ಖೋತ ಉಪಸ್ಥಿತರಿದ್ದರು ಮೊದಲಾದವರು.ಇಂದು ನಡೆದ ಪರಿಕ್ಷೆಯಲ್ಲಿ ಒಟ್ಟು 43 ವಿದ್ಯಾರ್ಥಿಗಳು ಗೈರಾಗಿದ್ದಾರೆ. ತಾಲೂಕಿಗೆ ಜಂಟಿ ನಿರ್ದೆಶಕ ಗಜಾನನ ಮನ್ನಿಕೇರಿ ಭೇಟಿ ನೀಡಿ ಪರೀಕ್ಷಾ ಕಾರ್ಯ ವೈಕರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. 
TV24 News Desk
the authorTV24 News Desk

Leave a Reply

error: Content is protected !!