ಜಿಲ್ಲೆಬೆಳಗಾವಿ

ಜಪ್ತಾಯ್ತು ಡಿಸಿ ಸರ್ಕಾರಿ ಇನೋವಾ! ಯಾಕೆ ಗೊತ್ತಾ

ಬೆಳಗಾವಿ:

30 ವರ್ಷಗಳ ಹಿಂದೆ ಗುತ್ತಿಗೆದಾರನಿಗೆ ಸಿಗಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಳಗಾವಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಚಿಕ್ಕೋಡಿಯ ದೂದಗಂಗಾ ನದಿಗೆ ಬ್ಯಾರೆಜ್ ನಿರ್ಮಿಸುವ ಉದ್ದೇಶದಿಂದ 1992 – 93 ರಲ್ಲಿ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ದಿ.‌ ನಾರಾಯಣ ಕಾಮತ್ ಎಂಬುವವರು ಗುತ್ತಿಗೆ ಪಡೆದಿದ್ದರು. ಷರತ್ತುಬದ್ದ ಗುತ್ತಿಗೆಯಲ್ಲಿ ಅನುದಾನ ನೀಡದ ಇಲಾಖೆ ವಿರುದ್ಧ 1995 ರಲ್ಲಿ ಗುತ್ತಿಗೆದಾರ ನ್ಯಾಯಾಲಯ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ್ದ ಬೆಳಗಾವಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಂಕಷ್ಟಕ್ಕೆ ಒಳಗಾಗಿದ್ದ ಗುತ್ತಿಗೆದಾರನಿಗೆ 34. ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶದ ಕುರಿತು ಸಣ್ಣ ನೀರಾವರಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು‌ . ಆದರೆ ವಿಚಾರಣೆ ಬಳಿಕ‌ 2024 ರ ಜೂನ್ ಒಳಗಾಗಿ ಗುತ್ತಿಗೆದಾರನಿಗೆ ಬಡ್ಡಿ ಸಮೇತ ಅರ್ಧದಷ್ಟು ಬಿಲ್ ಪಾವತಿಗೆ ಆದೇಶ ನೀಡಿತ್ತು.

ಹೈಕೋರ್ಟ್ ಆದೇಶದ ಹೊರತಾಗಿಯೂ ಗುತ್ತಿಗೆದಾರನಿಗೆ ನೀಡಬೇಕಿದ್ದ 1.34 ಕೋಟಿ ಬಾಕಿ ಬಿಲ್ ನೀಡಲು ಸಣ್ಣ ನೀರಾವರಿ ಇಲಾಖೆ ವಿಫಲವಾದ ಹಿನ್ನಲೆಯಲ್ಲಿ ನ್ಯಾಯಾಲಯ ವಾರಂಟ್ ಜಾರಿ ಮಾಡಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಲಾಗಿದೆ ಎಂದು ನ್ಯಾಯವಾದಿ ಓ.ಬಿ ಜೋಶಿ ಮಾಹಿತಿ ನೀಡಿದರು.

TV24 News Desk
the authorTV24 News Desk

Leave a Reply