ಜಿಲ್ಲೆಬೆಳಗಾವಿ

ಗೋವಾಗೆ ಬೇರೆ ಜನ ಹೋಗದಿದ್ದರೆ ಆ‌ ರಾಜ್ಯವೇ ನಡೆಯಲ್ಲ: ಹೆಬ್ಬಾಳಕರ್ ಆಕ್ರೋಶ

ಬೆಳಗಾವಿ:
ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಪಟ್ಟಂತೆ
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರ ಹಾಕಿದ್ದಾರೆ.ಗೋವಾ ಆಗಲಿ ಕರ್ನಾಟಕ ಆಗಲಿ ಭಾರತದ ಅವಿಭಾಜ್ಯ ಅಂಗ ಗೋವಾ ರಾಜ್ಯದಲ್ಲಿ ಈ ರೀತಿ ಮಾಡಿದ್ರೇ ಅದು ತಪ್ಪು‌ ಗೋವಾ ದಿಂದ ಅನೇಕ ಜನರು ಕರ್ನಾಟಕಕ್ಕೆ ಬರ್ತಾರೆ‌,ಕರ್ನಾಟಕ ಜನ ಕೂಡ ಗೋವಾಗೆ ಹೋಗುತ್ತಾರೆ.
ಗೋವಾ ರಾಜ್ಯಕ್ಕೆ ಬೇರೆಯವರು ಬರದೇ ಇದ್ರೇ ನಡೆಯಲ್ಲ ಈ ರೀತಿ ಮಾಡುವುದು ತಪ್ಪು ಅಂತಾ ಹೇಳ್ತಿನಿ ಎಂದರು ಇನ್ನು ಬೇರೆ ರಾಜ್ಯದ ಜನರಿಗೆ ತೊಂದರೆ ಆದ್ರೇ ಅಲ್ಲಿನ ಸರ್ಕಾರ ಸರಿ ಮಾಡಬೇಕು.
ಈ ವಿಚಾರದಲ್ಲಿ ಅಲ್ಲಿನ ಸರ್ಕಾರ ಮೌನ ವಹಿಸಬಾರದು ಎಂದ ಅವರು ಈ ಕುರಿತು
ಎಚ್.ಕೆ ಪಾಟೀಲ್ ಅವರ ಗಮನಕ್ಕೆ ವಿಚಾರ ತರುತ್ತೆನೆ ಎಂದರು.
ಇನ್ನು ಮಹದಾಯಿ ಯೋಜನೆ ವಿಳಂಬ ವಿಚಾರಕ್ಕೆ ಸಂಬಂದ್ಪಟ್ಟಂತೆ ಮಾತನಾಡಿದ ಅವರು ಮಹದಾಯಿ ಬಹಳಷ್ಟು ವರ್ಷದ ಹೋರಾಟ ನಾವು ನೀರಾವರಿಗೆ ಕೇಳ್ತಿಲ್ಲ ಕುಡಿಯಲು ಕೇಳ್ತಿದ್ದೇವೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡು ಸಿಹಿ ಹಂಚಿದ್ರು ಮಹದಾಯಿ ವಿಚಾರವನ್ನ ಬಿಜೆಪಿಯವರಿಗೆ ಕೇಳಿ ಎಂದರು. ಮಹದಾಯಿ ವಿಚಾರದಲ್ಲಿ ಕರ್ನಾಟಕದವರು ರಾಜಕಾರಣ ಮಾಡ್ತಿದ್ದಾರೆ ಎಂಬ ಗೋವಾ ಸಿಎಂ ಹೇಳಿಕೆ ವಿಚಾರಕ್ಕೆ
ಕರ್ನಾಟಕ ರಾಜ್ಯ ಸರ್ಕಾರಕ್ಕೆ
ಕುಡಿಯುವ ನೀರು, ಆರೋಗ್ಯ, ಶಿಕ್ಷಣ ವಿಚಾರದಲ್ಲಿ ರಾಜಕಾರಣ ಮಾಡುವ ಅನಿವಾರ್ಯತೆ ಇಲ್ಲ‌ ಎಂದರು ಇನ್ನು ಅಧಿಕಾರಿಗಳ ಜೊತೆಗೆ ಸುರ್ಜೇವಾಲಾ ಸಭೆ ವಿಚಾರಕ್ಕೆ ಸಂಬಂಧಪಟ್ಟಂತೆ
ಸುರ್ಜೇವಾಲಾ ಅವರು ಯಾವ ಇಲಾಖೆ ಅಧಿಕಾರಿಗಳನ್ನ ಕರೆದಿಲ್ಲ.
ಅವರು ನಮ್ಮನ್ನೆಲ್ಲಾ ಕರೆದು ಚರ್ಚೆ ಮಾಡಿದ್ದಾರೆ ಜನಪರ ಕಾಳಜಿ ಎನೂ ತೋರಿದೀರಾ, ಹೇಗೆ ಕೆಲಸ ಆಗ್ತಿದೆ ಅಂತಾ ಕೇಳಿದ್ದಾರೆ
ಇದನ್ನ ಪರಂಪರೆ ಅಂತಾ ಹೇಳಲು ಬರುವುದಿಲ್ಲ ಮೂರು ತಿಂಗಳಿಗೊಮ್ಮೆ ಅವರು ಮಾಡುವ ರೂಟಿನ್ ಕೆಲಸ‌ ಇದಕ್ಕೆ ಮೌಲ್ಯಮಾಪನ ಅಂತಾ ಹೇಳಲು ಬರುವುದಿಲ್ಲ ನಮ್ಮನ್ನ ಕರೆದು ಇಲಾಖೆ ಕುರಿತು ಎನೆಲ್ಲಾ ಮಾಡ್ತಿದೀರಿ ಅಂತಾ ಕೇಳ್ತಾರೆ.
ಇದಕ್ಕೆ ಮೌಲ್ಯಮಾಪನ ಅಂತಾ ಹೇಳಲು ಬರುವುದಿಲ್ಲ ಎಂದರು ಇನ್ನು ರಾಜಣ್ಣ ಅವರ‌ ಹೇಳಿಕೆ ಕುರಿತು ಮಾತನಾಡಿದ ಅವರು ಅವರು ಎನೂ ಹೇಳಿದ್ದಾರೆ ಗೊತ್ತಿಲ್ಲ ಅದಕ್ಕೆ ನಾನು ರಿಯಾಕ್ಟ್ ಕೊಡಲ್ಲ ಎಂದರು.ಸೆಪ್ಟೆಂಬರ್ ನಲ್ಲಿ ಕ್ರಾಂತಿ ಆಗುತ್ತೆ ಎಂಬ ರಾಜಣ್ಣ ಹೇಳಿಕೆ ವಿಚಾರಕ್ಕೆ ನಮ್ಮದು ಹೈಕಮಾಂಡ್ ಕೇಳುವ ಪಕ್ಷ, ಸಿಎಂ, ಡಿಸಿಎಂ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ ಎಂದು ಹೆಬ್ಬಾಳಕರ್ ಮಾತು ಮುಗಿಸಿದರು.

TV24 News Desk
the authorTV24 News Desk

Leave a Reply