Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಪಕ್ಷಕ್ಕೆ ದಕ್ಕೆಯಾಗಬಾರದೆಂದು ಹೇಳಿಕೆ ವಾಪಸ್: ಸತೀಶ್ ಜಾರಕಿಹೊಳಿ

ಬೆಳಗಾವಿ: ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ನಾನು ಹೇಳಿದ ಮಾತನ್ನು ವಾಪಸ್ ಪಡೆಯಲು ಒತ್ತಡ ಇತ್ತು. ನನ್ನ ಹೇಳಿಕೆಯನ್ನು ವಾಪಸ್ ಪಡೆದಿರುವೆ. ನಿನ್ನೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸಿ ವಾಪಸ್ ಪಡೆದಿದ್ದೇನೆ‌ ಎಂದರು.ಪಕ್ಷಕ್ಕೆ ದಕ್ಕೆ  ಆಗುವುದನ್ನು ತಡೆಯಲು ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ನೈಜ ಸುದ್ದಿ ಬಿಟ್ಟು ಬೇರೆ ಬೇರೆ  ತರಹದ ಆಯಾಮಗಳಲ್ಲಿ  ಚರ್ಚೆ ಪ್ರಾರಂಭವಾಗಿವೆ. ವೈಯಕ್ತಿಕವಾಗಿ ಪಕ್ಷಕ್ಕೆ ಡ್ಯಾಮೇಜ್‌ ಆಯಿತು. ಅದು ಖಾಸಗಿ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಅಲ್ಲ ಎಲ್ಲರೂ ಬೆಂಬಲಿಸುವ ನಿರೀಕ್ಷೆ ಇರಲಿಲ್ಲ. ಆದರೂ ಕೆಲವರು ಮಾತನಾಡಿದ್ದಾರೆ ಎಂದರು.

ಇದು ಇಷ್ಟಕ್ಕೆ ನಿಂತಿಲ್ಲ ಸ್ವಪಕ್ಷ, ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಮುಂದೆ ಕೆಲ ಸಂಗತಿ ಹೇಳುತ್ತೇವೆ. ನನಗೆ ಪಕ್ಷ ದೊಡ್ಡದು ಹೀಗಾಗಿ ಪಕ್ಷಕ್ಕೆ ದಕ್ಕೆಯಾಗಬಾರದೆಂದು ಆ ಪದ ವಾಪಸ್ ಪಡೆದಿರುವೆ ನನ್ನ ಮೇಲಿನ ಆರೋಪದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ನನ್ನ ಪತ್ರದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನಿನ್ನೆ ಸಾಯಂಕಾಲ ಈ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಹಿಂದೂ ಭಾವನೆಗಳಿಗೆ ಧಕ್ಕೆ ಆಗಿರುವ ವಿಚಾರಕ್ಕೆ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ವಿಚಾರವನ್ನು ಇಲ್ಲಿಗೆ ಕೈ ಬಿಡಿ ಎಂದು ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ವಿಚಾರವಾಗಿ ನಾವು ಯಾರೂ ಇನ್ಮುಂದೆ ಮಾತನಾಡುವುದಿಲ್ಲ. ಹೇಳಿಕೆ ವಾಪಸ್ಸು ಪಡೆದು ವಿಷಾದ ವ್ಯಕ್ತಪಡಿಸಿದ್ದಾರೆ. ಒಂದೊಂದು ಧರ್ಮ, ಜಾತಿಗೆ ಇದರ ಬಣ್ಣ ಕಟ್ಟುವುದು ಬೇಡ ಎಂದು ಹೇಳಿದರು 

TV24 News Desk
the authorTV24 News Desk

Leave a Reply

error: Content is protected !!