ಜಿಲ್ಲೆಬೆಳಗಾವಿ

ಮಗನ ಲಿವರ್ ತಂದೆಗೆ ಕಸಿ! ಕೆಎಲ್ಇ ವೈದ್ಯರಿಗೆ ಸಾಧಿಸಿದ ಖುಷಿ!

ಬೆಳಗಾವಿ;

ಮಗನ ಲಿವರ್ ತೆಗೆದು ತಂದೆಗೆ ಕಸಿ ಮಾಡುವಲ್ಲಿ ಬೆಳಗಾವಿಯ ಡಾ, ಪ್ರಭಾಕರ್ ಕೋರೆ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಸ್ಪತ್ರೆಯ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಜೀವಂತ ದಾನಿಯಿಂದ ಲಿವರ್ ತೆಗೆದು ಅವಶ್ಯಕತೆ ಇರುವ ವ್ಯಕ್ತಿಗೆ ಕಸಿ ಮಾಡಿದ್ದೆವೆ ಎಂದರು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ 56 ವರ್ಷದ ರೈತನಿಗೆ ಲಿವರ್ ಸಂಪೂರ್ಣವಾಗಿ ಕಾರ್ಯಕ್ಷಮತೆ ಕಳೆದುಕೊಂಡಿತ್ತು. ಹೀಗಾಗಿ ತಂದೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು.ಇದನ್ನು ಮನಗಂಡ ಮಗ ತನ್ನ ಲಿವರ್ ತನ್ನ ತಂದೆಗೆ ದಾನ ಮಾಡಲು‌ ಮುಂದಾಗಿದ್ದ, ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದ ನಂತರ ವೈದ್ಯರು ಜೀವಂತ ವ್ಯಕ್ತಿಯಿಂದ ಲಿವರ್ ಪಡೆದು ಅದನ್ನು ಕಸಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು..ಇನ್ನು ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರಾಲಾಜಿಸ್ಟ್ ಹಾಗೂ ಲಿವರ್ ತಜ್ಞ ಡಾ, ಸಂತೋಷ್ ಹಜಾರೆ ಮಾತನಾಡಿ ಕೊನೆಯ ಹಂತದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಂದೆಯ ಜೀವವನ್ನು ಉಳಿಸಲು ಅವರ 29 ವರ್ಷದ ಮಗ ತನ್ನ ಲಿವರಿನ ಸ್ವಲ್ಪ ಭಾಗವನ್ನು ದಾನ ಮಾಡಿದ್ದು ಶಸ್ತ್ರ ಚಿಕಿತ್ಸೆಯ ನಂತರ ದಾನಿ ಮತ್ತು ದಾನ ಪಡೆದ ರೋಗಿ ಇಬ್ಬರೂ ಗುಣಮುಖರಾಗಿದ್ದು ದಾನಿ 8 ದಿನಕ್ಕೆ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲಿದ್ದಾರೆ ಎಂದರು. ಅತ್ಯಂತ ಸಂಕಿರ್ಣ ಮತ್ತು ತಾಂತ್ರಿಕತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಸಹಕಾರದೊಂದಿಗೆ ಮುಖ್ಯ ಲಿವರ್ ಟ್ರಾನ್ಸಪ್ಲಾಂಟ್ ಶಸ್ತ್ರಚಿಕಿತ್ಸಕ ಡಾ, ಸೋನಲ್ ಅಸ್ತಾನಾ, ಡಾ, ವಚನ ಹುಕ್ಕೇರಿ ಹಾಗೂ ಡಾ, ರೋಮೇಸ್ ಎಸ್ ಅವರ ನೇತೃತ್ವದಲ್ಲಿ ಡಾ, ಸೋನಲ್ ಸುದರ್ಶನ್ ಚೌಗಲೇ, ಮತ್ತು ಕಿರಣ್ ಉರಬಿನಟ್ಟಿ ತಂಡವು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿ ಮುಗಿಸಿದೆ ಎಂದರು.ಇನ್ನು ತಂದೆಗೆ ಲಿವರ್ ದಾನ ಮಾಡಿದ ಮಗ ಮಾತನಾಡಿ ಯಶಸ್ವಿ ಲಿವರ್ ಕಸಿ ಮಾಡಿದ ವೈದ್ಯರಿಗೆ ಧನ್ಯವಾದ ಸಮರ್ಪಿಸಿದರು ಅಲ್ಲದೆ ದೇಹದ ಕುರಿತು ಪ್ರತಿಯೊಬ್ಬರು ಕಾಳಜಿ ತೆಗೆದುಕೊಳ್ಳಬೇಕು ದೇಹವನ್ನು ಮಣ್ಣಲ್ಲಿ ಮಣ್ಣಾಗಿ ಹೋಗಲು ಬಿಡದೆ ನಿಮ್ಮ ಪ್ರೀತಿ ಪಾತ್ರರಿಗೆ ತೊಂದರೆಗಳಾದಾಗ ಅವರಿಗೆ ಅಂಗಾಂಗ ದಾನ ಮಾಡಿ ಅವರ ಜೀವ ಉಳಿಸಬಹುದು ಎಂದರು. ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಗಳನ್ನು ಕೆ ಎಲ್ ಇ ಸಂಸ್ಥೆಯ ಡಾ, ಪ್ರಭಾಕರ್ ಕೋರೆ ಆಸ್ಪತ್ರೆಯು ನೆರವೆರಿಸಿರುವ ಕೀರ್ತಿಗೆ ಕೆಎಲ್ಇ ಪಾತ್ರವಾಗಿದೆ.

ಈ ವರೆಗೆ ಆಸ್ಪತ್ರೆಯಲ್ಲಿ 101 ಕ್ಕೂ ಹೆಚ್ಚು ಕಿಡ್ನಿ 22 ಲಿವರ್ ಹಾಗೂ 14 ಹೃದಯ ಕಸಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಗಿದೆ.ಅಲ್ಲದೆ ಅಸ್ತಿಮಜ್ಜೆ(ಬೋನ್ ಮ್ಯಾರೋ ಟ್ರಾನ್ಸಪ್ಲಾಂಟ್) ಕಸಿ ಕೂಡ ನೆರವೇರಿಸಲಾಗಿದೆ‌.  ಭಾಜಬವಾಗಿದೆ.
ಯಶಸ್ವಿ ಕಸಿ ಚಿಕಿತ್ಸೆ ನಡೆಸಿದ ಡಾ,ಸಂತೋಷ್ ಹಜಾರೆ ಹಾಗೂ ಡಾ, ಸುದರ್ಶನ್ ಚೌಗಲೇ ಅವರ ನೇತೃತ್ವದ ತಂಡವನ್ನು ಕಾರ್ಯದ್ಯಕ್ಷ. ಪ್ರಭಾಕರ್ ಕೋರೆ ಅಭಿನಂದಿಸಿದರು.

TV24 News Desk
the authorTV24 News Desk

Leave a Reply

error: Content is protected !!