ಕಮಲಕ್ಕೆ ಜೈ ಅಂದ ಮತದಾರ
ಬೆಳಗಾವಿ, ಲೋಕಸಭಾ ಚುನಾವಣೆಯಲ್ಲಿ ಹಲವು ಕಸರತ್ತಿನ ಬಳಿಕ ಬಿಜೆಪಿಯಿಂದ ಟಿಕೆಟ್ ಪಡೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ದಾಖಲೆ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಜಗದೀಶ್ ಶೆಟ್ಟರ್ ಅವರು 302649 ಮತಗಳನ್ನು ಗಳಿಸಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಅವರು 245442 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಇನ್ನೂ ಸಂಜೆ ಹೊತ್ತಿಗೆ ಚುನಾವಣಾ ಅಧಿಕಾರಿಗಳು ಅಧಿಕೃತ ಮಾಹಿತಿ ಹೊರ ಹಾಕಲಿದ್ದಾರೆ.
ಮತ ಎಣಿಕೆ ನೋಡಿದರೆ ಬೆಳಗಾವಿಯ ಮನೆ ಮಗನನ್ನೂ ಮತದಾರರು ‘ಕೈ’ ಬಿಟ್ಟಿದ್ದಾರೆ ಎಂಬುದು ಗೊತ್ತಾಗಿದೆ. ಈ ಮೂಲಕ ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ವಲಸಿಗ ಎಂಬ ಪಟ್ಟದಿಂದ ಮುಕ್ತವಾಗಿದ್ದಾರೆ. ದಾಖಲೆ ಮಟ್ಟದಲ್ಲಿ ಬೆಳಗಾವಿಯಲ್ಲಿ ಅವರು ಜಯ ಗಳಿಸಿದ್ದಾರೆ
tv24plus.in > Blog > ಜಿಲ್ಲೆ > ಬೆಳಗಾವಿ > ಶೆಟ್ಟರ್ ಗೆ ಲಕ್ ಅಕ್ಕಾಗೆ ಶಾಕ್ ..!
the authorTV24 News Desk
All posts byTV24 News Desk
Leave a reply










