ಬೆಳಗಾವಿ:
ಒಳ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಮಾದಿಗ ಸಮುದಾಯದಿಂದ ಪ್ರತಿಭಟನೆ ನಡೆಯಿತು.ನಗರದ ಅಂಬೇಡ್ಕರ್ ಗಾರ್ಡನ್ ನಿಂದ ಪ್ರಾರಂಭವಾದ ಒಳಮೀಸಲಾತಿ ಹೋರಾಟ ಚನ್ನಮ್ಮ ವೃತ್ತ ಬಳಸಿಕೊಂಡು ಡಿಸಿ ಕಚೇರಿ ತಲುಪಿತು.ಡಿಸಿ ಕಚೇರಿಗೆ ಬರುವ ಮುನ್ನ ಚನ್ನಮ್ಮ ವೃತ್ತದಲ್ಲಿ ನೆಲದ ಮೇಲೆ ಕುಳಿತು ಮಾದಿಗ ಮೀಸಲಾತಿ ಸಮೀತಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ. ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯ ನೇತೃತ್ವವನ್ನು ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಹಾಗೂ ಅವರ ಸುಪುತ್ರ ಅರುಣ್ ಐಹೊಳೆ ವಹಸಿಕೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಒಳಮೀಸಲಾತಿಗೆ ಸುಪ್ರಿಂ ಕೋರ್ಟ್ ತೀರ್ಪು ನೀಡಿ ವರ್ಷ ಕಳೆದಿದೆ. ಆದರೂ ಸಹ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯನ್ನು ಕಾಂಗ್ರೇಸ್ ಸರ್ಕಾರ ನೀಡುತ್ತಿಲ್ಲ. ಮಾದಿಗ ಸಮುದಾಯಕ್ಕೆ ರಾಜ್ಯ ಕಾಂಗ್ರೇಸ್ ಸರ್ಕಾರ ಮಹಾಮೋಸ ಮಾಡಿದೆ. ಒಳಮೀಸಲಾತಿ ಕಾಂಗ್ರೇಸ್ ಸರ್ಕಾರದ ಭಿಕ್ಷೆಯಲ್ಲ, ಬದಲಾಗಿ ಅದು ನಮ್ಮ ಹಕ್ಕು ಎಂದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ರಾಜ್ಯ ಸರ್ಕಾರ ಶೀಘ್ರವೇ ಒಳಮೀಸಲಾತಿಯನ್ನು ಮಾದಿಗ ಸಮುದಾಯಕ್ಕೆ ಘೋಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮಾದಿಗ ಸಮುದಾಯ ಮನವಿ ಮಾಡಿತು.


