ದೇಶಮನೋರಂಜನೆ

ಸನ್ನಿ ಲಿಯೋನ್  ವಂಚನೆ ಪ್ರಕರಣ ತಡೆಯಾಜ್ಞೆ ನೀಡಿದ ಹೈಕೋರ್ಟ್​

ಕೊಚ್ಚಿ: 2019ರ ವ್ಯಾಲೆಂಟೈನ್ಸ್​ ಡೇ ಕಾರ್ಯಕ್ರಮಕ್ಕೆ ನಟಿ ಸನ್ನಿ ಲಿಯೋನ್ ಅವರು ಕೊಚ್ಚಿಗೆ ಬರುವುದಾಗಿ ಒಪ್ಪಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಅವರು ಬರೋಬ್ಬರಿ 29 ಲಕ್ಷ ರೂಪಾಯಿ ಹಣ ಪಡೆದಿದ್ದರು. ಹಣ ಪಡೆದ ಹೊರತಾಗಿಯೂ ಅವರು ಕಾರ್ಯಕ್ರಮಕ್ಕ ಬರಲೇ ಇಲ್ಲ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ಆರೋಪಿಸಿ ಸನ್ನಿ ಲಿಯೋನ್ ಮೇಲೆ ಚೀಟಿಂಗ ಕೇಸ್ ದಾಖಲಿಸಿದ್ದರು   ಚೀಟಿಂಗ್ ಪ್ರಕರಣದಲ್ಲಿ ಸನ್ನಿಗೆ ಸಂಕಷ್ಟ ಎದುರಾಗಿತ್ತು.  ಹಣದ ವಿಚಾರದಲ್ಲಿ ನಟಿಯಿಂದ ಮೋಸ ಆಗಿದೆ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯೊಂದು ದೂರು ನೀಡಿತ್ತು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದರು.
ಸನ್ನಿ ಲಿಯೋನ್ ಹಾಗೂ ಅವರ ಪತಿ ಡ್ಯಾನಿಯಲ್ ವೇಬರ್ ವಿರುದ್ಧ ಕೇಸ್ ದಾಖಲಾಗಿತ್ತು. ನಟಿ ಹಾಗೂ ಅವರ ಪತಿ ಮೋಸ ಮಾಡಿದ್ದಾರೆ ಎಂದು ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ದೂರು ನೀಡಿತ್ತು. ಈ ತನಿಖೆಗೆ ತಡೆ ನೀಡಬೇಕು ಎಂದು ಸನ್ನಿ ಕೋರ್ಟ್​ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್​, ತನಿಖೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
TV24 News Desk
the authorTV24 News Desk

Leave a Reply