Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ದೇಶಮನೋರಂಜನೆ

ನಟನೆಯಿಂದ ದೂರವಾದ ಅಮೀರಖಾನ 

 ಅಮೀರ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಫ್ಲಾಪ್ ಆದ ನಂತರ ಇದೀಗ ಅಭಿಮಾನಿಗಳು ಎಳ್ಳಷ್ಟೂ ತಯಾರಿಲ್ಲದ ಇಂಥದ್ದೊಂದು ನಿರ್ಧಾರವನ್ನು ಅಮೀರ್ ತೆಗೆದುಕೊಂಡಿದ್ದಾರೆ. ಲಾಲ್ ಸಿಂಗ್ ಛಡ್ಡಾ ಫಿಲ್ಮ್ ನ ನಂತರ ಅಮೀರ್ ಅವರ ಮುಂದಿನ ಫಿಲ್ಮ್ ಬರಲಿದೆ ಎಂದೇ ಎಲ್ಲರೂ ಕಾಯುತ್ತಿದ್ದರು. ಹೀಗಾಗಿ ಮತ್ತೊಮ್ಮೆ ತಮ್ಮದೇ ಶೈಲಿಯಲ್ಲಿ ಜನರಿಗೆ ಹೊಸದನ್ನು ತೋರಿಸಬಹುದು…ಎಂದೆಲ್ಲ ನಿರೀಕ್ಷಿಸಿದ್ದರು. ಆದರೆ ಈ ನಡುವೆ ಅಮೀರ್ ಸಿನಿಮಾದಲ್ಲಿ ಅಭಿನಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅಲ್ಲದೆ ’ಚಾಂಪಿಯನ್ಸ್’ ಫಿಲ್ಮ್ ನ್ನು ನಿರಾಕರಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಿದ ಅಮೀರ್ ಖಾನ್, “ನಾನು ಈವಾಗ ನಟನೆಯಿಂದ ವಿರಾಮ ತೆಗೆದುಕೊಂಡು ತನ್ನ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತೇನೆ” ಎಂದು ಹೇಳಿದರು.
 ನಾನು ನನ್ನ ತಾಯಿಯೊಂದಿಗೆ, ನನ್ನ ಮಕ್ಕಳೊಂದಿಗೆ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ನಾನು ೩೫ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ  ನಾನು ನನ್ನ ಫಿಲ್ಮ್ ಗಳ ಮೇಲೆ ಮಾತ್ರ ಗಮನಹರಿಸುತ್ತಿದ್ದೇನೆ ಮತ್ತು ನನ್ನ ಹತ್ತಿರ ಇರುವವರಿಗೆ ನ್ಯಾಯ ಸಿಗಲಿ ಎಂದಿದ್ದಾರೆ. ನಾನು ನಟನಾಗಿ ಕೆಲಸ ಮಾಡುತ್ತಿಲ್ಲ ಆದರೆ ನಾನು ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ” ಎಂದಿರುವರು. ಅಮೀರ್ ಫಿಲ್ಮ್ ನ ನಿರ್ಮಾಣದ ಬಗ್ಗೆ ಹೇಳಿದ್ದಾರೆ. ಅವರ ಮುಂದಿನ ಫಿಲ್ಮ್ ’ಚಾಂಪಿಯನ್ಸ್’ ನಲ್ಲಿ ನಟನ ಬದಲು ನಿರ್ಮಾಪಕರಾಗಿ ಕೆಲಸ ಮಾಡುವ ಮೂಲಕ, ಅವರು ತಮ್ಮ ಜೀವನವನ್ನು ವಿಭಿನ್ನ ರೀತಿಯಲ್ಲಿ ಅನುಭವಿಸಲು ಬಯಸುತ್ತಾರೆ.
TV24 News Desk
the authorTV24 News Desk

Leave a Reply

error: Content is protected !!