Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಕಳ್ಳರೆಂದು ಬಾವಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು..!  

ಚಿಕ್ಕೋಡಿ: ಕಳ್ಳರೆಂದು  ಭಾವಿಸಿ ಮೂವರು ಯುವಕರನ್ನು  ಕಂಬಕ್ಕೆ ಕಟ್ಟಿ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹುಡುಗಿ ಭೇಟಿಯಾಗಲು ಸ್ನೇಹಿತನ ಜೊತೆ ಬಂದಿದ್ದ ಮೂವರಿಗೆ ಗ್ರಾಮಸ್ಥರು  ಥಳಿಸಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ.
 ಜೋಡಕುರಳಿ ಗ್ರಾಮದಲ್ಲಿ ಆಗಸ್ಟ್ 29 ರಂದು ಘಟನೆ ನಡೆದಿತ್ತು. ಗ್ರಾಮದಲ್ಲಿ  ಅನುಮಾಸ್ಪದವಾಗಿ ಕಂಡು ಬಂದ ಮೂವರು ಯುವಕರನ್ನು ಹಿಡಿದುಕೊಂಡ ಗ್ರಾಮಸ್ಥರು  ಅವರನ್ನು ವಿಚಾರಿಸಿದ್ದು ಈ ವೇಳೆ ಯುವಕರು ಸರಿಯಾದ ಮಾಹಿತಿ ನೀಡಿರಲಿಲ್ಲವಂತೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಮೂವರನ್ನು ಕಳ್ಳರು ಅಂತ ತಿಳಿದು ಕಂಬವೊಂದಕ್ಕೆ ಕಟ್ಟಿಹಾಕಿ ತಲಾ ಒಂದು ಪೆಟ್ಟು ಕೊಟ್ಟಿದ್ದರಂತೆ.
 
ಮೂವರು ಯುವಕರು ಸ್ನೇಹಿತನ ಮಾತು ನಂಬಿ ಬೆಳ್ಳಂಬೆಳಗ್ಗೆ ಜೋಡಕುರಳಿ ಗ್ರಾಮಕ್ಕೆ ಬಂದಿದ್ದರಂತೆ. ಹುಡುಗಿ ಭೇಟಿಯಾಗಲು ಬಂದವ ಎಸ್ಕೇಪ್ ಆಗಿದ್ದು, ಆತನೊಂದಿಗೆ ಬಂದ ಸ್ನೇಹಿತರು ಮಾತ್ರ ಗ್ರಾಮಸ್ಥರಿಗೆ ಸಿಕ್ಕ ಹಾಕಿಕೊಂಡಿದ್ದರಂತೆ. ಘಟನೆಯಲ್ಲಿ ಹಲ್ಲೆಗೊಳಗಾದ ಸುನಿಲ್ ಕಾಂಬಳೆಗೆ ಚಿಕ್ಕೋಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಾನು ಹಾಗೂ ನನ್ನ ಸ್ನೇಹಿತ ಕೂಡಿ ಹೋಗಿದ್ವಿ
 
ಚಿಕ್ಕೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಯುವಕ ಸುನಿಲ್ ಕಾಂಬಳೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ನನ್ನ ಸ್ನೇಹಿತ ಅಪಘಾತ ಆಗಿದೆ ಅಂತಾ ಫೋನ್ ಮಾಡಿದ್ದ, ಹೀಗಾಗಿ ಬೆಳ್ಳಂಬೆಳಗ್ಗೆ ಹೋಗಿದ್ದೆ. ನಾನು ಹಾಗೂ ನನ್ನ ಸ್ನೇಹಿತ ಕೂಡಿ ಹೋಗಿದ್ವಿ.
 
ಈ ವೇಳೆ ನಮ್ಮನ್ನು ಹಿಡಿದು ಏಕಾಏಕಿ ಹಲ್ಲೆ ಮಾಡಲು ಶುರು ಮಾಡಿದ್ದರು. ಆದರೆ ಹುಡುಗಿಯನ್ನ ಭೇಟಿ ಆಗಲು ಬಂದ ವಿಷಯ ನನ್ನ ಸ್ನೇಹಿತ ನನಗೆ ಹೇಳಿರಲಿಲ್ಲ. ಮಧ್ಯರಾತ್ರಿಯೇ ಅವರು ಬಂದಿದ್ದರು, ಬಳಿಕ ಫೋನ್ ಮಾಡಿದ ಬಳಿಕ ನಾನು ಹೋಗಿದ್ದೆ. ನಮಗೆ ಮಾತನಾಡಲು ಅವಕಾಶ ನೀಡದೇ ಹಲ್ಲೆ ಮಾಡಿದ್ದರು ಎಂದು ತಿಳಿಸಿದ್ದಾನೆ.
 
ಹುಡುಗಿ ಭೇಟಿಗೆ ಹೋಗಿದ್ದ ಅನ್ನೋದು ಗೊತ್ತಿರಲಿಲ್ಲ
 
ಬೆಳಗ್ಗೆ 5:45 ರಿಂದ 6:30ರವರೆಗೂ ಕಂಬವೊಂದಕ್ಕೆ ಕಟ್ಟಿ ಹಾಕಿದ್ದರು. ಹುಡುಗಿ ಭೇಟಿಯಾಗಲು ಬಂದ ಸ್ನೇಹಿತ ಅಲ್ಲಿಂದ ಓಡಿ ಹೋಗಿದ್ದ. ಆತನ ಜೊತೆಗೆ ಬಂದಿದ್ದ ಮತ್ತೋರ್ವ, ನಾನು ನನ್ನ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದರು.
ಸ್ನೇಹಿತನಿಗೆ ಅಪಘಾತ ಆಗಿದೆ ಅಂತಾ ಹೋಗಿದ್ವಿ, ಹುಡುಗಿ ಭೇಟಿಗೆ ಹೋಗಿದ್ದ ಅನ್ನೋದು ಗೊತ್ತಿರಲಿಲ್ಲ. ಕಟ್ಟಿಗೆಯಿಂದ ಬಡೆದು ಮುಖಕ್ಕೆ ಒದ್ದು ಹಲ್ಲೆ
TV24 News Desk
the authorTV24 News Desk

Leave a Reply

error: Content is protected !!