ಬೆಳಗಾವಿಬೆಳಗಾವಿ ನಗರ

 ಸಿಎಂ ಬೊಮ್ಮಾಯಿ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ:ಟೋಪಣ್ಣವರ

 ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಕಡೆಗಣಿಸಿ ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಂಗಳೂರು ಹಾಗೂ ಮಂಗಳೂರಿನ ಹೊರಭಾಗದಲ್ಲಿ ಹೈಟೆಕ್ ಸಿಟಿ ನಿರ್ಮಾಣ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಅಸಮಾಧಾನ ಹೊರ ಹಾಕಿದ್ದಾರೆ.ರಾಜ್ಯ ಬಿಜೆಪಿ ಸರಕಾರ ಬೆಳಗಾವಿಗೆ ಮಾಡುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಗುರುವಾರ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ರಾಜೀವ ಟೋಪಣ್ಣವರ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ತಂತ್ರಜ್ಞಾನ ಶೃಂಗದ ರಜತೋತ್ಸವದಲ್ಲಿ ಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ ಉತ್ತೇಜಿಸಲು ಬೆಳಗಾವಿ ಜಿಲ್ಲೆಯನ್ನು ಕಡೆಗಣಿಸಿ ರಾಜ್ಯದ ಆರು ಜಿಲ್ಲೆಗಳಲ್ಲಿ ಹೈ ಟೆಕ್ ಸಿಟಿ ನಿರ್ಮಾಣ ಘೋಷಣೆ ಮಾಡಿರುವುದು ಜಿಲ್ಲೆಯ ಜನರಿಗೆ ಬೇಸರ ತರಿಸಿದೆ. ಕೇವಲ ಹೈ ಟೆಕ್ ಸಿಟಿ ಕುರಿತು ಮಾತ್ರವಲ್ಲ ಸ್ಟಾರ್ಟ್ ಅಪ್ ಕ್ಲಸ್ಟರ್‍ನಲ್ಲಿಯೂ ಬೆಳಗಾವಿಗೆ ಅನ್ಯಾಯವಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿ ಕ್ಲಷ್ಟರ್ ನಿರ್ಮಾಣ ಮಾಡಿದರು.ಅದರ ಎಲ್ಲಾ ಕಾರ್ಯಕ್ರಮ, ಯೋಜನೆಗಳು ಕೇವಲ ಹುಬ್ಬಳ್ಳಿ-ಧಾರವಾಡದ ಪಾಲಾಗುತ್ತಿವೆ ವಿನಃ ಬೆಳಗಾವಿಗೆ ಬರುತ್ತಿಲ್ಲ. ಆರ್ಟಿಫಿಷಯಲ್ ಇಂಟಲಿಜೆನ್ಸ್ ಎಕ್ಸಿಲೆನ್ಸ್ ಸೆಂಟರ್ ಬೆಳಗಾವಿ ಜಿಲ್ಲೆಗೆ ಘೋಷಣೆ ಮಾಡಿ ಹುಬ್ಬಳ್ಳಿ-ಧಾರವಾಡದಲ್ಲಿ ಮಾಡುತ್ತಿದ್ದಾರೆ. ಒಂದೇ ಭಾರತ ರೈಲ್ವು ಕೇವಲ ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ಮಾತ್ರ ಪ್ರಾರಂಭಮಾಡಿದ್ದಾರೆ. ಅದು ಬೆಳಗಾವಿಯವರೆಗೂ ಮಾಡಿದ್ದರೆ ಇಲ್ಲಿನ ಜನರಿಗೆ ಅನುಕೂಲವಾಗುತ್ತಿತ್ತು. 100 ಎಕರೆಯಲ್ಲಿ ಸ್ಟಾರ್ಟ್ ಅಪ್ ಲಾಂಚ್ ಪ್ಯಾಡ್ ಹುಬ್ಬಳ್ಳಿ ಧಾರವಾಡಕ್ಕೆ ಕೊಟ್ಟು ಬೆಳಗಾವಿಗೆ ಕೊಡಲಿಲ್ಲ ಎಂದು ಕಿಡಿಕಾರಿದರು.ರಾಜ್ಯ ಸರಕಾರ ತೆರಿಗೆ ವಿಷಯ ಬಂದಾಗ ಎರಡನೇ ಸ್ಥಾನ ಬೆಳಗಾವಿ ಜಿಲ್ಲೆಯಿಂದ ಪಾವತಿಸುತ್ತೇವೆ. ವೈದ್ಯಕೀಯ ಸೌಲಭ್ಯ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನಮ್ಮ ಜಿಲ್ಲೆಯಲ್ಲಿ ಸುಮಾರು 53 ಲಕ್ಷ ಜನಸಂಖ್ಯೆ ಇದೆ. ಕಡಿಮೆ ಹಾಸಿಗೆಯ ಸೌಲಭ್ಯ ಇದೆ. ಇಲ್ಲಿ ಬರುವ ಸಾಕಷ್ಟು ಯೋಜನೆಗಳು ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಪಾಲಾಗುತ್ತಿವೆ. ಕಳೆದ ವಾರ ಸಚಿವ ಸಂಪುಟ ಸಭೆಯಲ್ಲಿ ಸ್ಪೇಷಲ್ ಇನ್ಸಟಮೆಂಟ್ ಝೋನ ಹುಬ್ಬಳ್ಳಿ-ಧಾರವಾಡ, ತುಮಕೂರಗೆ ನೀಡಿ ಬೆಳಗಾವಿ ಜಿಲ್ಲೆಗೆ ನೀಡಲಿಲ್ಲ. ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಬೆಳಗಾವಿ ಜಿಲ್ಲೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇನ್ನು ವಿಶೇಷ ಹೂಡಿಕೆ ವಲಯದಲ್ಲಿಯೂ ಬೆಳಗಾವಿಗೆ ಅನ್ಯಾಯ ಮಾಡಿ ಹುಬ್ಬಳ್ಳಿ-ಧಾರವಾಡಕ್ಕೆ ಮಾಡಿದೆ.ಹೈಟೆಕ್ ಸಿಟಿಯೂ ಬೆಳಗಾವಿಯನ್ನು ಕಡೆಗಣಿಸಿ ಹುಬ್ಬಳ್ಳಿ-ಧಾರವಾಡಕ್ಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ಜನರ ಜೊತೆಗೆ ಅವಿನಾಭಾವ ಸಂಬಂಧ ಇದೆ. ಬೆಳಗಾವಿಯ ಸಮಗ್ರ ಮಾಹಿತಿ ತಿಳಿದಿದ್ದಾರೆ. ಮುಖ್ಯಮಂತ್ರಿಯಾದ ಮೇಲೆ ಜಿಲ್ಲೆಯ ಜನರು ಸಾಕಷ್ಟು ಭರವಸೆ ಇಟ್ಟಿದ್ದರು. ಅದು ಹುಸಿಯಾಗಿದೆ. ಕೂಡಲೇ ಬೆಳಗಾವಿಗೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಶಂಕರ ಹೆಗಡೆ, ಅಸ್ಲಮ ತಹಶಿಲ್ದಾರ, ಸುದರ್ಶನ ಶಿಂಧೆ, ಶಬ್ಬೀರ ಮುಲ್ಲಾ, ರವೀಂದ್ರ ಬೆಲ್ಲದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply

error: Content is protected !!