Uncategorized

ಮತ್ತೆ ಬೆಳಗಾವಿಯಲ್ಲಿ ಎಂಇಎಸ್ ಆಟಾಟೋಪ ಬ್ಯಾನ್ ಮಾಡುವಂತೆ ಕರವೇ ಪ್ರತಿಭಟನೆ!!

ಬೆಳಗಾವಿ:

ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಮತ್ತೆ ಪುಂಡಾಟ ನಡೆಸಿದೆ.ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ವಿರೋಧಿಸಿ ಪುಂಡಾಟಿಕೆ ನಡೆಸಿದ್ದು ಬೆಳಗಾವಿ ಡಿಸಿ ಕಚೇರಿಯಲ್ಲಿ ಜಮಾವಣೆಯಾಗಿ, ಸರ್ಕಾರದ ಆದೇಶ ಹರಿದು ಉದ್ಧಟತನ ತೋರಾಗಿದೆ.
ಪೊಲೀಸರ ಸಮ್ಮುಖದಲ್ಲೇ ಸರ್ಕಾರದ ಕನ್ನಡ ಕಡ್ಡಾಯ ಆದೇಶ ಹರಿದು ಆಟಾಟೋಪ ಮೆರೆದಿದ್ದು ಡಿಸಿ ಕಚೇರಿಯ ಆವರದಣಲ್ಲೇ ನಾಡದ್ರೋಹಿ ಘೋಷಣೆ ಕೂಗಲಾಗಿದೆ‌.
ಕರ್ನಾಟಕ ಸರ್ಕಾರದ ದಾದಾಗಿರಿ ನಡೆಯುವುದಿಲ್ಲ ಅಂತಾ ನಾಡದ್ರೋಹಿ ಘೋಷಣೆ ಕೂಗಿದ್ದು ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಬೀದರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಅಂತಾ ನಾಡದ್ರೋಹಿ ಘೋಷಣೆ ಹಾಕಿ ಪುಂಡಾಟ ನಡೆಸಿದ್ದಾರೆ.
ಬೀಗಿ ಪೊಲೀಸ್ ಭದ್ರತೆಯಲ್ಲಿ ಎಂಇಎಸ್ ಪುಂಡರಿಂದ ಕ್ಯಾತೆ ತೆಗೆಯಾಲಾಗಿದ್ದು ಮರಾಠಿ ಭಾಷೆಯಲ್ಲಿ ನಾಮಫಲಕ, ದಾಖಲೆಗಳನ್ನ ನೀಡುವಂತೆ ಪುಂಡಾಟಿಕೆ ಮೆರೆಯಾಗಿದೆ.
ಇನ್ನು ಮತ್ತೊಂದು ಕಡೆ ಕರವೇ ವತಿಯಿಂದ ಎಂಇಎಸ್ ಸಂಘಟನೆ ನಿಷೇಧ ಮಾಡುವಂತೆ ಒತ್ತಾಯಿಸಿ ಕರವೇ ಪ್ರತಿಭಟನಾ ಮೆರವಣಿಗೆ ಮಾಡಲಾಗಿದೆ.
ಬೆಳಗಾವಿ ವಿರೇಭದ್ರೇಶ್ವರ ಕ್ರಾಸನಿಂದ ಬೆಳಗಾವಿ ಡಿಸಿ ಕಚೇರಿವರೆಗೆ ಪ್ರತಿಭಟನೆ ಮಾಡಿದ್ದು ಎಂಇಎಸ್ ನಾಯಕರನ್ನು ಗಡಿಪಾರು ಮಾಡಬೇಕು ಎಂಇಎಸ್ ಸಂಘಟನೆ ನಿಷೇಧ ಮಾಡಬೇಕೆಂದು ಒತ್ತಾಯಿಸಲಾಗಿದೆ. ಬೆಳಗಾವಿ ಡಿಸಿ ಎದುರೇ ಆದೇಶ ಪ್ರತಿಹರಿದು ಹಾಕಿರೋ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ್ ಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

TV24 News Desk
the authorTV24 News Desk

Leave a Reply