Uncategorized

ಚಿಕನ್ ಊಟದಲ್ಲಿ ಹಲ್ಲಿ ಪತ್ತೆ ರಾಯಭಾಗ ದಾಬಾದಲ್ಲಿ ಘಟನೆ!ಮಾಲೀಕನಿಗೆ ನೋಟೀಸ್ ಜಾರಿ!

ಸತ್ತ ಹಲ್ಲಿ ಪತ್ತೆಯಾಗಿರುವುದು
ಮಾಲೀಕನಿಗೆ ಅಧಿಕಾರಿಗಳಿಂದ ನೋಟಿಸ್ ಜಾರಿ!

ಬೆಳಗಾವಿ:

ದಾಬಾಗಳಲ್ಲಿನ ಊಟ ಅಂದರೆ ನಮ್ಮ ಯುವಕರು ಆಹಾ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನಲು ಮುಂದಾಗುತ್ತಾರೆ. ಆದರೆ ದಾಬಾದಲ್ಲಿ ಅಲ್ಲಿನ ಮಾಲೀಕರು ಎಷ್ಟು ಶುಚಿತ್ವಕ್ಕೆ ಬೆಲೆ ಕೊಡುತ್ತಾರೆ ಎನ್ನುವುದನ್ನು ಯಾರೂ ವಿಚಾರಿಸುವುದಿಲ್ಲ.ಈಗ್ಯಾಕೆ ಈ ಮಾತು ಹೇಳ್ತಿದಿವಿ ಅಂದ್ರೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಸಹಾರಾ ದಾಬಾದಲ್ಲಿ ಊಟದ ತಟ್ಟೆಯಲ್ಲಿ ಹಲ್ಲಿ ಪತ್ತೆಯಾಗಿದ್ದು ಸತ್ತ ಹಲ್ಲಿಯನ್ನು ನೋಡಿದ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.ವಿಷಯ ‌ತಿಳಿಯುತ್ತಿದ್ದಂತೆ ಭಾರತೀಯ ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸಹಾರಾ ದಾಬಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅಧಿಕಾರಿಗಳ ಭೇಟಿಯ ವೇಳೆ ದಾಬಾದಲ್ಲಿ ಶುಚಿತ್ವ ಇಲ್ಲದ ಕಾರಣ ಸಹಾರಾ ದಾಬಾ ಮಾಲೀಕನನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ದಾಬಾದಲ್ಲಿ ಶುಚಿತ್ವ ಕಾಪಾಡುವಂತೆ ಮಾಲೀಕನಿಗೆ ವಾರ್ನಿಂಗ್ ನೀಡಿದ್ದಷ್ಟೇ ಅಲ್ಲದೆ ದಾಬಾ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ. ಸದ್ಯ ಈ ಪ್ರಕರಣದಿಂದ ದಾಬಾದಲ್ಲಿ ಬಾಯಿ ಚಪ್ಪರಿಸೋಕೆ ಮುಂದಾಗುತ್ತಿದ್ದ ಯುವಕರ ಕಣ್ತೆರೆಸಿದರೆ.ಇತ್ತ ಹಾದಿಗೊಂದು ದಾಬಾ ಮಾಡಿಕೊಂಡಿರುವ ದಾಬಾ ಮಾಲೀಕರ ವಿರುದ್ಧವೂ ಸರಿಯಾದ ಕ್ರಮ ಕೈಗೊಳ್ಳಬೇಕು ಶುಚಿತ್ವ ಕಾಪಾಡದ ದಾಬಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ದಾಬಾ ಮಾಲೀಕರಿಗೂ ಸಹ ಬಿಸಿ ಮುಟ್ಟಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!