Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಅರ್ಬಾಜ್ ಸಾವಿಗೆ ನ್ಯಾಯ ದೊರಕಿಸಿ ಕೊಡಿ

ಬೆಳಗಾವಿ: ಇಡೀ ಬೆಳಗಾವಿ ಬೆಚ್ಚಿ ಬೆಳಿಸಿದ  ಅರ್ಬಾಜ್ ಮುಲ್ಲಾನ ಕೊಲೆಪ್ರಕರಣದಲ್ಲಿ ಹಂತಕರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಪಿರಣವಾಡಿಯ ಗ್ರಾಮಸ್ಥರು ಇಂದು ಬೃಹತ್ ಮೆರವಣಿಗೆ ನಡೆಸಿ ತೀವ್ರ ಪ್ರತಿಭಟನೆ ನಡೆಸುವ ಮೂಲಕ ಅರ್ಬಾಜ್ ಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದ ಅರ್ಬಾಜ್ ರಫೀಕ್ ಮುಲ್ಲಾ ಎಂಬಾತನನ್ನು ಪ್ರಶಾಂತ್ ಹಾಗೂ ಪ್ರಸಾದ್ ಎಂಬ ಯುವಕರು ‘ಹುಟ್ಟುಹಬ್ಬ ಮಾಡೋಣ’ ಎಂದು ಮನೆಯಿಂದ ಕರೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಪ್ರಕರಣದಲ್ಲಿ ಬೆಳಗಾವಿ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಮುಂದೆ ಯಾರೂ ಇಂತಹ ಕೃತ್ಯ ಎಸಗದಂತೆ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿ ಪೀರನವಾಡಿ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಮೆರವಣಿಗೆ ನಡೆಸಿದರು. ತೀವ್ರ ಪ್ರತಿಭಟನೆ ನಡೆಸುವ ಮೂಲಕ ಅರ್ಬಾಜ್ಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.
TV24 News Desk
the authorTV24 News Desk

Leave a Reply

error: Content is protected !!