ಜಿಲ್ಲೆಬೆಳಗಾವಿ

ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಸೇತುವೆ ಸಂಪೂರ್ಣ ಬಂದ್

ಬೆಳಗಾವಿ:

ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ‌. ಅಲ್ಲದೆ ಕೃಷ್ಣೆಯ ಉಪನದಿಗಳಾದ ವೇದಗಂಗಾ ದೂಧಗಂಗಾ ನದಿಗಳೂ ಸಹ ಮೈದುಂಬಿ ಹರಿಯುತ್ತಿವೆ.‌ಸಧ್ಯ ಕುಡಚಿ ಉಗಾರ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆ ಮುಳುಗಡೆಯಾಗಿದೆ.ಸೇತುವೆಯ ಮೇಲೆ ಸಧ್ಯ ಒಂದು ಅಡಿ ನೀರು ಹರಿಯುತ್ತಿದ್ದು ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ. ಕೃಷ್ಣಾ ನದಿಗೆ ಈಗಾಗಲೇ 1 ಲಕ್ಷ 40 ಸಾವಿರ ಕ್ಯೂಸೇಕ್ ಒಳಹರಿವಿನ ಪ್ರಮಾಣವಿದೆ. ಅಲ್ಲದೆ ಮಹಾರಾಷ್ಟ್ರದ ಕೊಯ್ನಾ ಹಾಗೂ ವಾರಣಾ, ರಾಧಾನಗರಿ ಜಲಾಶಯಗಳಿಂದಲೂ ಅಧಿಕೃತವಾಗಿ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಕೃಷ್ಣಾ ನದಿ ಮೈದುಂಬಿಕೊಂಡಿದೆ. ಕುಡಚಿ ಸೇತುವೆಯನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಪರ್ಕಿಸುವ ಮುಖ್ಯ ಕೊಂಡಿ ಎಂದು ಕರೆಯಲಾಗುತ್ತದೆ. ಸಧ್ಯ ಕುಡಚಿ ಸೇತುವೆ ‌ಮುಳುಗಡೆಯಾಗಿದ್ದು ಜನರು ಸಧ್ಯ ಅನ್ಯ ಮಾರ್ಗದ ಮೂಲಕ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಅತ್ತ ರೈಲ್ವೆ ಸಂಪರ್ಕ ಮಾತ್ರ ಪ್ರಾರಂಭವಿದ್ದು ಜನ ಈಗ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲು ರೈಲು ಮಾರ್ಗವನ್ನೆ ಮೆಚ್ಚಿಕೊಳ್ಳುವಂತಾಗಿದೆ. ಇನ್ನು ಮುಂಜಾಗೃತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕುಡಚಿ ಪೊಲೀಸರು ನದಿಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ. ನೀರು ಕಡಿಮೆಯಾಗುವವರೆಗೂ ಕುಡಚಿ ಸೇತುವೆ ಸಂಚಾರಕ್ಕೆ ಬಂದ್ ಆಗಿಯೇ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಚಿ ಸೇತುವೆ ಮೇಲೆ ನೀರು ಬಂದಿರುವುದು
TV24 News Desk
the authorTV24 News Desk

Leave a Reply