Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಬೆಳಗಾವಿ 70 ರೌಡಿಗಳ ಮನೆ ಮೇಲೆ ರೆಡ್ 

ಬೆಳಗಾವಿ : ರಾಜ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಳಗಾವಿ ನಗರದಲ್ಲಿ ಮುಂಜಾಗೃತ ಕ್ರಮವಾಗಿ  ಪೊಲೀಸ್ ಆಯುಕ್ತರಾದ ಡಾ. ಎಂ ಬಿ ಬೋರಲಿಂಗಯ್ಯ   ಮಾರ್ಗದರ್ಶನದಲ್ಲಿ ಡಿಸಿಪಿ ಡಿಸಿಪಿ ಎಚ್.ಟಿ ಶೇಖರ್ ಅವರ   ನೇತೃತ್ವದಲ್ಲಿ ಬೆಳಗಾವಿ ನಗರದಲ್ಲಿ ಇಂದು  ಒಟ್ಟು 70 ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ಕೈಗೊಳ್ಳಲಾಯಿತು.

ಎಸಿಪಿ ಅಪರಾಧ ಮತ್ತು ಮಾರ್ಕೆಟ, ಖಡೇಬಜಾರ, ಹಾಗೂ ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಹಾಗೂ ನಗರದ ಎಲ್ಲ ಠಾಣೆಯ ಪಿಐ ಹಾಗೂ ಸಿಬ್ಬಂದಿಯವರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

ದಾಳಿ ಕಾಲಕ್ಕೆ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಜಾಲಗಾರ ಗಲ್ಲಿಯಲ್ಲಿ ವಾಸಿಸುತ್ತಿದ್ದ ಒಬ್ಬ ರೌಡಿ ಶೀಟರ್ ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ, ಆತನ ಬಳಿ 02 ತಲವಾರಗಳು ಸಿಕ್ಕಿದ್ದು, ಅವುಗಳನ್ನು ಜಪ್ತಪಡಿಸಿಕೊಂಡು ಆತನ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ ಚುನಾವಣಿಯು ಭಯಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಜರುಗಿಸುವ ನಿಟ್ಟಿನಲ್ಲಿ  ಹಾಗೂ ಬೆಳಗಾವಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಸಲುವಾಗಿ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!