Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಯುವಕರ ಭವಿಷ್ಯಕ್ಕಾಗಿ ಬಿಜೆಪಿ ಸರ್ಕಾರ ಬೇಕು ; ಬಿಎಸ್ ವೈ 

ಬೆಳಗಾವಿ : ಬುಧವಾರ ಧರ್ಮನಾಥ ಭವನದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರು, ಪ್ರಧಾನಿ ಮೋದಿ, ಅಮಿತ್ ಶಾ ಕರ್ನಾಟಕದಲ್ಲಿ ಬಿಜೆಪಿ ಬರಲು ಸಂಕಲ್ಪ ತೊಟ್ಟು ಪ್ರವಾಸ ಮಾಡ್ತಿದ್ದಾರೆ.ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಕಾಂಗ್ರೆಸ್‌ ಗೆ ಭವಿಷ್ಯ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಉತ್ತರ ಪ್ರದೇಶದ ಚುನಾವಣೆಯಲ್ಲಿ 400 ಸೀಟ್‌ನಲ್ಲಿ ಕೇವಲ 4 ಸೀಟ್ ಗೆದ್ರು,ದೆಹಲಿ ಸೋಲು ಅನುಭವಿಸಿ ಬೀದಿ ಪಾಲಾಗಿದ್ದಾರೆ ಎಂದು ಹೇಳಿದರು
ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಹೋಲಿಕೆ ಮಾಡಲು ಸಾಧ್ಯ ಏನು? ರಾಜ್ಯದಲ್ಲಿ 130 – 135 ಸೀಟ್ ಗೆದ್ದು ಸರ್ಕಾರ ರಚನೆ ಮಾಡೋದು ಸೂರ್ಯ ಚಂದ್ರ ಎಷ್ಟು ಸತ್ಯವೋ ಅಷ್ಟೇ ಸತ್ಯ ಎಂದು ಹೇಳಿದರು.
ಒಂದು ಕಾಲದಲ್ಲಿ ಹಣಬಲ ತೋಳ್ಬಲ್‌, ಜಾತಿ ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುತ್ತಿದ್ದರು.ಇಂದು ಜನರು ಜಾಗೃತರಾಗಿದ್ದಾರೆ, ಯುವಕ ಯುವತಿಯರು ಬಿಜೆಪಿಯತ್ತ ನೋಡುತ್ತಿದ್ದಾರೆ. ಯುವಕರ ಭವಿಷ್ಯಕ್ಕಾಗಿ ಬಿಜೆಪಿ ಸರ್ಕಾರ ಬರಬೇಕು ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬೆಳಗಾವಿ ಉತ್ತರ, ವಿಜಯಪುರ ನಗರ ರಾಜ್ಯದ ಅತ್ಯಂತ ಸೂಕ್ಷ್ಮ ಕ್ಷೇತ್ರ ಆಗಿವೆ.ಈ ಕ್ಷೇತ್ರಗಳು ಮುಸ್ಲಿಂ ಕ್ಷೇತ್ರ ಆಗಿವೆ. ವಿಜಯಪುರದಲಿ 1 ಲಕ್ಷ ಮುಸ್ಲಿಂ, 1 ಲಕ್ಷ 70 ಸಾವಿರ ಹಿಂದೂಗಳಿದ್ದಾರೆ.ಬೆಳಗಾವಿ ಉತ್ತರ ಮತಕ್ಷೇತ್ರವನ್ನ ನಾವು ಕಳೆದುಕೊಳ್ಳಬಾರದು ಎಂದರು.
ಮುಂಬೈ ಕರ್ನಾಟಕದಲ್ಲಿ ಹೆಚ್ಚು ಮುಸ್ಲಿಂ ಇರುವ ಕ್ಷೇತ್ರ ಬೆಳಗಾವಿ ಉತ್ತರ, ವಿಜಯಪುರ,ಕಳೆದ ಬಾರಿ ಬಿಜೆಪಿ ಜಯಭೇರಿ ಸಾಧಿಸಿತ್ತು, ಈ ಕ್ಷೇತ್ರ ಕಳೆದುಕೊಳ್ಳಬಾರದು ಎಂದು ಹೇಳಿದರು.ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ ಆದರೂ ನಾನಿಲ್ಲಿ ಬಂದಿದ್ದೇನೆ, ಅಲ್ಲಿಯ ಹಿಂದೂಗಳು ನೀವು ಹೋಗಿ ಪ್ರಚಾರ ಮಾಡಿ ಎಂದರು
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಗಟ್ಟಿಯಾಗಿ ಹೋರಾಟ ಮಾಡಿರುವೆ ಎಂದು ಹೇಳಿದರು.ಈಗ ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿ ಸಿಕ್ಕಿದೆ.ಮುಸ್ಲಿಂ ಸಮುದಾಯಕ್ಕೆ ಸಂವಿಧಾನ ಬಾಹಿರವಾಗಿ ಹೆಚ್ಚಿನ ಮೀಸಲಾತಿ ನೀಡಿದ್ದರು. ಲಿಂಗಾಯತ, ಮರಾಠಾ, ಜೈನ ಸಮುದಾಯಕ್ಕೆ ಶೇಕಡಾ 7 ರಷ್ಟು ಮೀಸಲಾತಿ ಕೊಟ್ಟಿದ್ದು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಸಿಎಂ ಬೊಮ್ಮಾಯಿ ಎಂದರು.
ಅನಿಲ್ ಬೆ‌ನಕೆಗೆ ಟಿಕೆಟ್ ತಪ್ಪಿದ್ದರೂ ಪಕ್ಷದ ಕೆಲಸ ಮಾಡುತ್ತಿದ್ದಾರೆ.ಬೆಳಗಾವಿ ಉತ್ತರ ಮತಕ್ಷೇತ್ರ ದಲ್ಲಿ  ಬಿಜೆಪಿ ಅಭ್ಯರ್ಥಿ ರವಿ ಪಾಟೀಲ್ ಗಾಗಿ  ಆಕ್ಟಿವ್ ಆಗಿ ಕೆಲಸ ಮಾಡಿರಿ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ, ಸಂಸದೆ ಮಂಗಳ ಅಂಗಡಿ, ಎಂ ಬಿ ಜಿರಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
TV24 News Desk
the authorTV24 News Desk

Leave a Reply

error: Content is protected !!