Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ರಾಜ್ಯ

ಅಥಣಿ ಮೂಲದ ಮಹಿಳಾ ಅಧಿಕಾರಿ ಆತ್ಮಹತ್ಯೆ 

ಮೈಸೂರು: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೈಸೂರು ಜಿಲ್ಲೆಯ ಬಿಳಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಬಿಳಿಕೇರಿ ಶ್ಯಾನುಬೋಗನಹಳ್ಳಿ ವಲಯ ಲೆಕ್ಕಾಧಿಕಾರಿ ಕೃಷ್ಣಾಬಾಯಿ ತುಕಾರಾಮ ಫಡಕೆ ( ೨೫)  ಮೃತ ಪಟ್ಟ ದೃದೈವಿ ಯಾಗಿದ್ದಾರೆ. ಕೃಷ್ಣಾಬಾಯಿ ಬೆಳಗಾವಿ ಜಿಲ್ಲೆಯ ಅಥಣಿ ಮೂಲದವರು. ಒಂದು ತಿಂಗಳ ಹಿಂದೆಯಷ್ಟೆ ಬೆಳಗಾವಿಯ ಸುಬಾಷ ಬೋಸ್ಲೆಯವರನ್ನು ಮದುವೆಯಾಗಿದ್ದಾರೆ.    ಸುಬಾಷ ಬೋಸ್ಲೆಯವರು ಅರಣ್ಯ ಇಲಾಖೆಯಲ್ಲಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೃಷ್ಣಾಬಾಯಿ ಅವರು ನಾಲ್ಕು ದಿನಗಳ ಹಿಂದೆಯಷ್ಟೆ ಕೆಲಸಕ್ಕೆ ಹಾಜರಾಗಿದ್ದರು. ಸಹದ್ಯೋಗಿ ಚೈತ್ರ  ಅವರೊಂದಿಗೆ ಬಿಳಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಂದು ಕೃಷ್ಣಾಬಾಯಿ ದೇಹ  ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಬಿಳಿಕೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply

error: Content is protected !!