Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಎಂಇಎಸ್ ಪುಂಡರು ಹೇಡಿಗಳು : ಶಾಸಕ ಯತ್ನಾಳ್ ಕಿಡಿ

ಬೆಳಗಾವಿ:ಪೋಲಿಸರ ಮೇಲೆ ಹಲ್ಲೆ ಮಾಡೋದು, ಕರ್ನಾಟಕದ ಬಸ್ ಗಳ ಮೇಲೆ ಕಲ್ಲೆಸೆಯುವುದು ಹೇಡಿತನದ ಲಕ್ಷಣ ಎಂದು ಎಂಇಎಸ್ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು. ಇಂದು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಗಡಿ ಸಮಸ್ಯೆ ಇತ್ಯರ್ಥ ಕುರಿತಾಗಿ ಮಾತನಾಡುತ್ತಾ ಇದನ್ನು ಪರಿಹಾರ ಮಾಡಿಕೊಳ್ಳಲು, ಕೋರ್ಟ ಇದೆ ಕಾನೂನಿದೆ. ಕೇಂದ್ರದ ಗ್ರಹ ಸಚಿವರು ಮೊನ್ನೆ ತಾನೇ ಮದ್ಯಸ್ಥಿಕೆ ವಹಿಸಿ ಮಾತನಾಡಿದ್ದಾರೆ. ಆದರೂ ಎಂಇಎಸ್ ಪುಂಡಾಟಿಕೆ ಮೆರೆಯುತ್ತಿರೋದು ಸರಿಯಲ್ಲ. ಸುಪ್ರಿಂ ಕೋರ್ಟ್ ತೀರ್ಪು ಬರೋತನಕ ಸುಮ್ಮನಿರಿ. ಬೆಳಗಾವಿಯಲ್ಲಿ ಎಷ್ಟು ಜನ ಎಂಇಎಸ್ ಶಾಸಕರಿದ್ದಾರೆ, ಎಷ್ಟು ಜನ ಕಾರ್ಪೋರೆಟರ್ ಗಳಿದ್ದಾರೆ ಅನ್ನೋದು ಗೊತ್ತಿದೆ. ಜನರಿಗೆ ಅಭಿವೃದ್ಧಿ ಬೇಕಾಗಿದೆ ಅದಕ್ಕೆ ಎಂಇಎಸ್ ಇಲ್ಲಿ ನೆಲಕಚ್ಚಿಗೆ ಎಂದು ಟಾಂಗ್ ಕೊಟ್ಟರು.
ಇನ್ನು ಪಂಚಮಸಾಲಿ ಮೀಸಲಾತಿ ಬಗ್ಗೆ ಮಾತನಾಡಿದ ಅವರು, 22 ರಂದು ಸಿಎಂ ಅವರು ಮೀಸಲಾತಿ ಘೋಷಣೆ ಮಾಡುತ್ತಾರೆ ಅನ್ನೋ ವಿಶ್ವಾಸವಿದೆ. ಹಾಗಂತ ಮಾಡದೇ ಹೋದರೆ, ನಾನು ಬಂಡಾಯ ಮಾಡುತ್ತೇನೆ, ಹೋರಾಟ ಮಾಡುತ್ತೇನೆ, ರಾಜೀನಾಮೆ ಕೊಡುತ್ತೇನೆ, ಪ್ರಾಣ ಕೊಡುತ್ತೇನೆ ಅನ್ನೋ ಡೈಲಾಗ್ ಹೊಡೆಯೋ ಹೀರೋ ಅಲ್ಲ, ಹೆಬ್ಬಾಳ್ಕರ್ ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು
TV24 News Desk
the authorTV24 News Desk

Leave a Reply

error: Content is protected !!