

ಬೆಳಗಾವಿ:
ಬೆಳಗಾವಿಯ ಜಿಮಖಾನ್ ಕ್ಲಬ್ ನಲ್ಲಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದರ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ
ನಿನ್ನೆ ಯುನಿಯನ್ ಜಿಮಖಾನ್ ಜಾಗೆಯಲ್ಲಿ ಪಿಸ್ತೂಲ್ ದಿಂದ ಫೈಯರ್ ಮಾಡಿದ ಘಟನೆ ಆಗಿದೆ ಕ್ಯಾಂಪ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪಿರ್ಯಾದಿ ಸುರೇಶ್ ಜಾಲಗಾರ ಪ್ರಫುಲ್ ಪಾಟೀಲ್ ಮೇಲೆ ದೂರು ನೀಡಿದ್ದಾನೆ ಕ್ಲಬ್ ನ ಮ್ಯಾನೇಜರ್ ಕಡೆಯಿಂದ ಸುರೇಶ್ ಜಾಲಗಾರ, ರಾಜು ಕಡೋಲ್ಕರ್ ಸೇರಿ ಹಲವರ ಮೇಲೆ ದೂರು ದಾಖಲಾಗಿದೆ.
ಕ್ಲಬ್ ನಡೆಸಲು ಅನುಮತಿ ಇರದಿದ್ರೂ ನಡೆಸಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕಮೀಷನರ್ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕಳೆದ ವರ್ಷ ಪ್ರಫುಲ್ ಪಾಟೀಲ್ ಮೇಲೆ ಹಲ್ಲೆಯಾಗಿತ್ತು ಈ ಪ್ರಕರಣದಲ್ಲಿ ಸುರೇಶ್ ಜಾಲಗಾರ ಭಾಗಿಯಾಗಿದ್ದ ಇದರ ಸೇಡು ತೀರಿಸಿಕೊಳ್ಳಲು ಘಟನೆ ಆಗಿದೆ ಅಂತಾ ಹೇಳಲಾಗ್ತಿದೆ ಎರಡು ತಂಡ ರಚನೆ ಮಾಡಿ ರಾತ್ರಿಯಿಂದ ಹುಡುಕಾಟ ನಡೆಸಿದ್ದಾರೆ.ಸುರೇಶ್ ಜಾಲಗಾರ, ಫ್ರಫುಲ್ ಪಾಟೀಲ್ ರೌಡಿ ಶೀಟರ್ ಇದ್ದು.ಶೀಘ್ರದಲ್ಲಿ ಆರೋಪಿಗಳನ್ನ ಗಡಿಪಾರು ಮಾಡಲು ಚಿಂತನೆ ಮಾಡ್ತಿವಿ ಎಂದು ಭೂಷಣ್ ಬೊರಸೆ ಹೇಳಿದ್ದಾರೆ.









