ಬೆಳಗಾವಿ:
ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಕಂಡಿದೆ.ಅವಧಿ ಪೂರ್ವ ಮಳೆ, ಮಹಾರಾಷ್ಟ್ರದಿಂದ ಬೆಳಗಾವಿ ಮಾರುಕಟ್ಟೆಗೆ ಈರುಳ್ಳಿ ಲಗ್ಗೆ ಇಡುತ್ತಿರುವ ಹಿನ್ನೆಲೆ ದರ ಕುಸಿತವಾಗಿದೆ.
ಮಹಾರಾಷ್ಟ್ರದಿಂದ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಈರುಳ್ಳಿ ಒಂದೇ ಸಮಯಕ್ಕೆ ಬೆಳಗಾವಿ ಎಪಿಎಂಸಿಗೆ ಬರುತ್ತಿರುವ ಹಿನ್ನೆಲೆ
ಈರುಳ್ಳಿ ಬೆಲೆ ಕ್ವಿಂಟಲ್ ಗೆ 1200 ರಿಂದ 2000 ರೂಪಾಯಿ ದರವಾಗಿದೆ.ಕಳೆದ ವರ್ಷ ಕ್ವಿಂಟಲ್ ಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಈರುಳ್ಳಿ ದರ ಇತ್ತು ಆದರೆ ಈ ವರ್ಷ ಏಕಾಏಕಿ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ.
ಉತ್ತಮ ದರಕ್ಕಾಗಿ ವರ್ಷಾನುಗಟ್ಟಲೇ ಈರುಳ್ಳಿ ಸಂಗ್ರಹಿಸಿಟ್ಟಿದ್ದ ರೈತರು ಸಧ್ಯ ಆಕಾಶ ನೋಡುವ ಪರಿಸ್ಥಿತಿ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ಕಡೆ ನಿರಂತರ ಮಳೆಗೆ ಈರುಳ್ಳಿ ಹಾಳಾಗ್ತಿರುವುದಕ್ಕೆ ರೈತರು ಒಮ್ಮೆಲೆ ಮಾರುಕಟ್ಟೆಗೆ ಈರುಳ್ಳಿ ತರುತ್ತಿದ್ದಾರೆ.
ಇತ್ತ ಮಹಾರಾಷ್ಟ್ರದಿಂದಲೂ ಈರುಳ್ಳಿ ಆಗಮನ ಹಿನ್ನೆಲೆ ಹೆಚ್ಚಿನ ಪ್ರಮಾಣದಲ್ಲಿ ಎಪಿಎಂಸಿಯಲ್ಲಿ ಈರುಳ್ಳಿ ಸಂಗ್ರಹ ಆಗುತ್ತಿದ್ದಂತೆ ದರ ಕುಸಿತ ಕಂಡಿದೆ.
ಬೆಳಗಾವಿಯಿಂದ ಗೋವಾ, ಗುಜರಾತ್, ಹೈದರಾಬಾದ್ ಗೆ ಈರುಳ್ಳಿ ರಫ್ತಾಗುತ್ತಿತ್ತು. ಅಲ್ಲದೆ
ಬಾಂಗ್ಲಾದೇಶ ಸೇರಿದಂತೆ ಹಲವು ದೇಶಕ್ಕೆ ಈರುಳ್ಳಿ ರಫ್ತು ಸ್ಥಗಿತಗೊಂಡಿದ್ದೂ ಕೂಡ ರೈತರ ಮೇಲೆ ಎಪೇಕ್ಟ್ ಆಗಿದೆ.
ಸೂಕ್ತ ಬೆಲೆ ನೀಡುವಂತೆ ಬೆಳಗಾವಿ ಎಪಿಎಂಸಿಯಲ್ಲಿ ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿಗೆ ಸೂಕ್ತ ದರ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ.

