Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಜನರು ಕೊರೆಯುವ ಚಳಿಗೆ  ಗಡ ಗಡ..!

ಬೆಳಗಾವಿ: ಬಂಗಾಳಕೊಲ್ಲಿಯಲ್ಲಿ  ಚಂಡಮಾರುತ ಸೃಷ್ಟಿಯಾಗಿದ್ದು, ಈಶಾನ್ಯ ಮಾರುತಗಳ ತಣ್ಣನೆಯ ಗಾಳಿ ದಕ್ಷಿಣ ಭಾರತದತ್ತ ಬೀಸುತ್ತಿವೆ. ಇದರಿಂದ ಉಷ್ಣಾಂಶ ಇಳಿಕೆಯಾಗಿ ಚಳಿ ಹೆಚ್ಚಾಗುತ್ತಿದೆ. ಚಳಿಗಾಲದ ರಾಜಧಾನಿ ಬೆಳಗಾವಿ ಈಗ ಕೊರೆಯುವ ಚಳಿಯಿಂದ ಗಡಗಡ ಎನ್ನುತ್ತಿದೆ. ಈ  ಚಳಿಗೆ ಬೆಳಗಾವಿ ಜನತೆ ಈಗ ಕಂಗೆಟ್ಟಿದ್ದಾರೆ.ಬೆಳಗಾವಿಯ ಬಸವನಕೊಳ್ಳದಲ್ಲಿ ಅತ್ಯಂತ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ಉತ್ತರ ಕರ್ನಾಟಕದಲ್ಲಿ ಇದೀಗ ಚಳಿಯಿಂದ ಜನ ಮನೆಯಿಂದ ಹೊರ ಬರಲು ಉದಾಸೀನತೆ ಪಡುವಂತಾಗಿದೆ. ಫೆಬ್ರವರಿವರೆಗೂ ಚಳಿಯಿಂದ ಹೇಗೆ ಪಾರಾಗುವುದು ಎಂದು ಜನ ಯೋಚಿಸುವಂತಾಗಿದೆ. ಒಟ್ಟಾರೆ ಗಡಿನಾಡಿನಲ್ಲಿ ಚಳಿಯ ಕಾಟಕ್ಕೆ ಜನ ನಡುಗುತ್ತಿರೋದು ಸುಳ್ಳಲ್ಲ.
TV24 News Desk
the authorTV24 News Desk

Leave a Reply

error: Content is protected !!