Uncategorized

ಮೂರನೇ ದಿನಕ್ಕೆ ಕಾಲಿಟ್ಟ ಹಿಡಕಲ್ ಸಂತ್ರಸ್ಥರ ಅಹೋರಾತ್ರಿ ಹೋರಾಟ!ಕ್ಯಾರೇ ಎನ್ನದ ಸರ್ಕಾರ!

ಬೆಳಗಾವಿ:

ಬೆಳಗಾವಿಯಲ್ಲಿ ಹಿಡಕಲ್ ಜಲಾಶಯ ಸಂತ್ರಸ್ತರ ಹೋರಾಟ ತೀವ್ರಗೊಂಡಿದೆ.ಸಥ ಮೂರನೇ ದಿನವು ಸಂತ್ರಸ್ತರ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ.ಬೆಳಗಾವಿ ಉತ್ತರ ವಲಯ ನೀರಾವರಿ ನಿಮಗದ ಕಚೇರಿಯಲ್ಲಿ ಮುಂದೆ ಹೋರಾಟ ನಡೆದಿದ್ದು ಕಚೇರಿ ಆವರಣದಲ್ಲಿ ರೈತರು ಜಾನುವಾರುಗಳನ್ನ ಕಟ್ಟಿ ಕಿಡಿ ಕಾರುತ್ತಿದ್ದಾರೆ.ಭೂಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ಜಾರಕಿಹೊಳಿ,ಬೀರನಹಳ್ಳಿ,ಸುತಗಟ್ಟಿ, ಗುಡಗನಟ್ಟಿ ಗ್ರಾಮದ ರೈತರಿಂದ ಪ್ರತಿಭಟನೆ ನಡೆದಿದೆ.ಹುಕ್ಕೇರಿ ತಾಲೂಕಿನ 9, ಬೆಳಗಾವಿ ತಾಲೂಕಿನ 1 ಗ್ರಾಮದ ಸಂತ್ರಸ್ತರಿಂದ ಪ್ರತಿಭಟನೆ ನಡೆದಿದ್ದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ಹೊರಹಾಕಿದ್ದಾರೆ.ಸರ್ಕಾರದ ದಿಕ್ಕು ತಪ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡ್ತಿದ್ದಾರೆ.394ಎಕರೆ ಭೂ ಸ್ವಾಧೀನಕ್ಕೆ ಪರಿಹಾರ ಕೊಡ್ತಿಲ್ಲ ಪರಿಹಾರ ಕೊಡೊವರೆಗೂ ಕಚೇರಿ ಬಿಟ್ಟು ಕದಲೊದಿಲ್ಲ ಎಂದು ಪಟ್ಟು ಹಿಡಿದಿದ್ದು ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಹತ್ತು ಹಳ್ಳಿಯಲ್ಲಿ ಯಾರೇ ಸತ್ತರು ಶವವಿಟ್ಟು ಹೋರಾಟ ಮಾಡ್ತಿವಿ ಎಂದು ಸರ್ಕಾರಕ್ಕೆ ಸಂತ್ರಸ್ತರು ಎಚ್ಚರಿಕೆ‌ ನೀಡಿದ್ದಾರೆ.

TV24 News Desk
the authorTV24 News Desk

Leave a Reply