Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ರಾಜ್ಯ

ಸಿಎಂ  ಆಪ್ತಸಹಾಯಕ ಹರೀಶ  ಹನಿಟ್ರ್ಯಾಪ್ ಬಲೆಗೆ 

ಬೆಂಗಳೂರು: ಪರಿಷತ್ ಡಿ ದರ್ಜೆ ನೌಕರಳಾಗಿರುವ ಯುವತಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತಸಹಾಯಕ  ಆಗಿರುವ ಹರೀಶ ಅವರಿಗೆ ಹನಿಟ್ರ್ಯಾಪ್ ಮಾಡಿದ್ದು, ನಂತರ  ಬ್ಲ್ಯಾಕಮೇಲ್ ಮಾಡುವ  ಮೂಲಕ ಹಲವು ಮಹತ್ವದ ದಾಖಲೆಗಳನ್ನು ಪಡೆದಿದ್ದಾಳೆ. ಅಲ್ಲದೇ ಹಣ ವಸೂಲಿಯನ್ನೂ ಮಾಡಿದ್ದಾಳೆ. ಹೀಗೆ ಪಡೆದ ದಾಖಲೆಗಳನ್ನು ವಿರೋಧ ಪಕ್ಷಗಳಿಗೆ ನೀಡಿರುವ ಅನುಮಾನವಿದೆ ಎಂದು ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ನಟರಾಜ ಶರ್ಮಾ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲು  ಯುವತಿ  ಮುಖ್ಯಮಂತ್ರಿ  ಬೊಮ್ಮಾಯಿಯವರ ಆಪ್ತಸಹಾಯಕ ಹರೀಶ ಜೊತೆ ಸಲುಗೆ ಬೆಳೆಸಿ ಟ್ರ್ಯಾಪ್ ಮಾಡಿದ್ದಾಳೆ. ಬಳಿಕ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕಮೇಲ್ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದಾಳೆ. ಹನಿಟ್ರ್ಯಾಪ್ ಗೆ ಒಳಗಾಗಿದ್ದ ಹರೀಶ ಅವರನ್ನು ಈಗಾಗಲೇ ಸೇವೆಯಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು  ದೂರಿನಲ್ಲಿ ವಿಶ್ಲೇಷಿಸಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!