ಕ್ರೀಡೆಟ್ರೆಂಡ್

IPL 2025: ವಿರಾಟ್ ಕೊಹ್ಲಿ ಖಚಿತ: ಉಳಿದವರೇ RCB ತಂಡದ ದೊಡ್ಡ ಚಿಂತೆ

PL 2025 Virat Kohli: ವಿರಾಟ್ ಕೊಹ್ಲಿ 2008 ರಿಂದ ಆರ್​ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಕಾನ್​ ಆಗಿ ಮಾರ್ಪಟ್ಟಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಯನ್ನು ಆರ್​ಸಿಬಿ ಫ್ರಾಂಚೈಸಿ ಕೈ ಬಿಡುವುದಿಲ್ಲ ಎಂಬುದು ಖಚಿತವಾಗಿದೆ.

IPL 2025: ಐಪಿಎಲ್ ಸೀಸನ್-18ರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ವಿರಾಟ್ ಕೊಹ್ಲಿಯನ್ನು ತಂಡದಲ್ಲೇ ಉಳಿಸಿಕೊಳ್ಳುವುದು ಖಚಿತವಾಗಿದೆ. ಆದರೆ ಉಳಿದ ರಿಟೈನ್ ಆಯ್ಕೆಯೇ ಈಗ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಏಕೆಂದರೆ ಆರ್​ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅದರಲ್ಲೂ ನಾಯಕ ಫಾಫ್ ಡುಪ್ಲೆಸಿಸ್ ಉತ್ತಮ ಫಾರ್ಮ್ ಪ್ರದರ್ಶಿಸಿದರೂ ಅವರಿಗೆ ಈಗ 40 ವರ್ಷ. ಹೀಗಾಗಿ ಅವರನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದೇ ಆರ್​ಸಿಬಿ ಮುಂದಿರುವ ದೊಡ್ಡ ಪ್ರಶ್ನೆ.

ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಅವರನ್ನು ಆರ್​ಸಿಬಿ ಉಳಿಸಿಕೊಳ್ಳಲು ಬಯಸಿದರೂ, ಅವರು ಫಾರ್ಮ್​ನಲ್ಲಿಲ್ಲ. ಹೀಗಾಗಿ ಟೀಮ್ ಇಂಡಿಯಾವನ್ನು ವೇಗಿಯನ್ನು ಕೋಟಿ ರೂ. ನೀಡಿ ಉಳಿಸಿಕೊಳ್ಳಬೇಕಾ ಎಂಬುದೇ ಈಗ ಆರ್​ಸಿಬಿ ಪಾಲಿಗೆ ಪ್ರಶ್ನೆಯಾಗಿ ಉಳಿದಿದೆ.

ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಕಳೆದ ಬಾರಿ ಆರ್​ಸಿಬಿ ರಿಟೈನ್ ಮಾಡಿಕೊಂಡಿತ್ತು. ಆದರೆ ಐಪಿಎಲ್ 2024 ರಲ್ಲಿ ಮ್ಯಾಕ್ಸ್​ವೆಲ್ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಈ ಬಾರಿ ಕೈ ಬಿಡುವುದು ಖಚಿತ ಎನ್ನಲಾಗಿದೆ.

ಇನ್ನೊಂದೆಡೆ ಯುವ ದಾಂಡಿಗ ರಜತ್ ಪಾಟಿದಾರ್ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರನ್ನು ಉಳಿಸಿಕೊಳ್ಳಬೇಕಿದ್ದರೆ ಕನಿಷ್ಠ 11 ಕೋಟಿ ರೂ. ನೀಡಬೇಕಾಗುತ್ತದೆ. ಇಷ್ಟು ಮೊತ್ತ ನೀಡಲು ಆರ್​ಸಿಬಿ ಕೂಡ ಸಿದ್ಧರಿಲ್ಲ. ಹೀಗಾಗಿ ಅವರ ಮೇಲೆ ಆರ್​ಟಿಎಂ ಆಯ್ಕೆ ಪ್ರಯೋಗಿಸುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಆರ್​ಸಿಬಿ ತಂಡದಲ್ಲಿರುವ ಆಟಗಾರರ ಕಳಪೆ ಫಾರ್ಮ್​​ ಈಗ ರಿಟೈನ್ ಪ್ರಕ್ರಿಯೆಯನ್ನು ವಿಳಂಬಗೊಳಿಸಿದೆ. ಇದಾಗ್ಯೂ ರಿಟೈನ್ ಪಟ್ಟಿ ಸಲ್ಲಿಸಲು ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಉಳಿದಿದ್ದು, ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ಯಾರನ್ನು ತಂಡದಲ್ಲೇ ಉಳಿಸಿಕೊಳ್ಳಲಿದ್ದಾರೆ? ಯಾರನ್ನು ಕೈ ಬಿಡಲಿದ್ದಾರೆ ಎಂಬುದೇ ಕುತೂಹಲ. ಈ ಕುತೂಹಲಕ್ಕೆ ಉತ್ತರ ಸಿಗಲು ಈ ತಿಂಗಳಾಂತ್ಯದವರೆಗೆ ಕಾಯಲೇಬೇಕು.

TV24 News Desk
the authorTV24 News Desk

Leave a Reply