Uncategorized

ಸಂಧ್ಯಾನಾಗರಾಜ್ ಹಾಗೂ ಆರೋಪಿ ಸಾಯಿಕುಮಾರ್ ವಿರುದ್ಧ ಖಾಸಗಿ ದೂರು ದಾಖಲಿಸಿದ ಹಿಂಡಲಗಾ ಜೈಲು ಸಹಾಕಯ ಅಧೀಕ್ಷಕ!

ಬೆಳಗಾವಿ:

ಮಹಿಳಾ ಪಿಎಸ್ಐ ಮಸಾಲಾ ವಿಡಿಯೋ‌ಗೆ ಹಿಂಡಲಗಾ ಕೇಂದ್ರ ಕಾರಾಗೃಹ ಲಿಂಕ್ ವುಚಾರಕ್ಕೆ ಸಂಬಂಧಿಸಿಂದತೆ ಪ್ರಕರಕಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು ಹಿಂಡಗಲಾ ಜೈಲು ಸಹಾಯಕ ಅಧಿಕ್ಷಕ ಮಲ್ಲಿಕಾರ್ಜುನ್ ಕೊಣ್ಣೂರ್ ಬೆಳಗಾವಿಯ ಕೋರ್ಟ್ ಮೆಟ್ಟಿಲೇರಿದ್ದಾರೆ.
ಜೈಲಿನ ಬಗ್ಗೆ ಅವಹೇಳನ ಮಾಡಿದ ಆರೋಪಿಗಳ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದು ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಹಿಂಡಲಗಾ ಜೈಲಿನ ಘನತೆಗೆ ಚ್ಯುತಿ ತಂದವರ ವಿರುದ್ಧ ಕ್ರಮಕ್ಕೆ ದೂರಿನಲ್ಲಿ ಮನವಿ ಮಾಡಲಾಗಿದ್ದು ಸಾಮಾಜಿಕ ಕಾರ್ಯಕರ್ತೆ ಸಂಧ್ಯಾ ನಾಗರಾಜ್ ಹಾಗೂ ಈ ಹಿಂದೆ ಹಿಂಡಲಗಾ ಜೈಲಿನ ಕೈದಿ ತುಮಕೂರು ಮೂಲದ ಸಾಯಿಕುಮಾರ್ ವಿರುದ್ಧ ದೂರು ದಾಖಲಾಗಿದೆ.
ಖಾಸಗಿ ವ್ಯಕ್ತಿಗೆ ಬೆತ್ತಲೆ ಆಗಿ ವಿಡಿಯೋ ಕಾಲ್ ಮಾಡಿದ್ದ ಕೆಐಎಸ್ಎಫ್‌ನ ಮಹಿಳಾ ಪಿಎಸ್ಐ ಮಹಿಳಾ ಪಿಎಸ್ಐ ಮಸಾಲಾ ವಿಡಿಯೋ Sandhya777nagraj ಇನ್ಸ್ಟಾ ಐಡಿಯಲ್ಲಿ ಅಪ್ಲೋಡ್ ಮಾಡಲಾಗಿತ್ತು. ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡಿರುವುದು ಹಿಂಡಲಗಾ ಜೈಲಿನಲ್ಲಿ ಎಂದು ಉಲ್ಲೇಖಿಸಲಾಗಿತ್ತು.ಸಾಲದೆಂಬಂತೆ ಈ ಫೋಸ್ಟ್‌ನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭಾವಚಿತ್ರವನ್ನು ಹಾಕಲಾಗಿತ್ತು.
ಕಾರಾಗೃಹ ಸುಧಾರಣೆ ಇಲಾಖೆಯ ಎಡಿಜಿಪಿ ಭಾವಚಿತ್ರ ಬಳಸಿ ವಿಡಿಯೋ ಫೋಸ್ಟ್ ಮಾಡಲಾಗಿತ್ತು.ಹಿಂಡಲಗಾ ಜೈಲಿಗೂ ಮಹಿಳಾ ಪಿಎಸ್ಐಗೂ ಯಾವುದೇ ಸಂಬಂಧವಿಲ್ಲ.ಬೆತ್ತಲೆ ವಿಡಿಯೋ ಹರಿಬಿಟ್ಟು ಜೈಲಿನ ಘನತೆಗೆ ಧಕ್ಕೆ ತರಲಾಗಿದೆ ಎಂದು ದೂರು ದಾಖಲಿಸಲಾಗಿದ್ದು ತಪ್ಪಿತಸ್ಥರ ವಿರುದ್ಧ ಬಿಎನ್ಎಸ್ 356(2)(3) ಅಡಿ ಕ್ರಮ ವಹಿಸಲು ಮನವಿ ಮಾಡಲಾಗಿದೆ.
ಎರಡನೇ ಜೆಎಂಎಫ್‌ಸಿ ಕೋರ್ಟ್‌ನ ಸರ್ಕಾರಿ ಅಭಿಯೋಜಕ ಮಹಾಂತೇಶ ಮೂಲಕ ಖಾಸಗಿ ದೂರು ದಾಖಲಿಸಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!