Uncategorizedಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಿತ್ತೂರಿಗೆ ಬಂದ್ರೆ ಅಧಿಕಾರ ಹೋಗುತ್ತಾ? ಹೀಗೊಂದು ಮೌಢ್ಯದ ಸುದ್ದಿ!ಇಂದು ಸಿಎಂ ಕಿತ್ತೂರಿಗೆ!

ಬೆಳಗಾವಿ: ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಆಗಮಿಸಿದರೆ ಮುಖ್ಯಮಂತ್ರಿಗಳ ಕುರ್ಚಿ ಕಳೆದುಹೋಗುತ್ತದೆ ಎಂಬ ಮೌಢ್ಯತೆ ಹಾಗೂ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿರುವ ಅಪನಂಬಿಕೆಗೆ ತೆರೆ ಎಳೆಯಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುತ್ತಿರುವುದು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ ಶೌರ್ಯ, ಸಾಹಸ ಮತ್ತು ಬ್ರಿಟಿಷರ ವಿರುದ್ಧದ ಹೋರಾಟದ ಇತಿಹಾಸವನ್ನು ಸ್ಮರಿಸುವ ನಾಡಹಬ್ಬವೇ ಕಿತ್ತೂರು ಉತ್ಸವ. ಆದರೆ, ಈ ಐತಿಹಾಸಿಕ ಉತ್ಸವಕ್ಕೆ ಆಗಮಿಸಿದರೆ ಮುಖ್ಯಮಂತ್ರಿಗಳ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂಬ ವಿಚಿತ್ರ ನಂಬಿಕೆಯೊಂದು ಹಲವು ವರ್ಷಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ನಂಬಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದಿದ್ದರೂ, ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಈ ರೀತಿಯ ಮಾತುಗಳು ಪ್ರಚಲಿತಕ್ಕೆ ಬಂದಿದ್ದವು.


1990ರ ದಶಕದಲ್ಲಿ ಆರಂಭವಾದ ಮೌಢ್ಯತೆಯ ಚರ್ಚೆ!


1990ರ ದಶಕದಲ್ಲಿ ಕರ್ನಾಟಕದ ರಾಜಕೀಯದಲ್ಲಿ ನಡೆದ ಮಹತ್ವದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ರೀತಿಯ ಅಪನಂಬಿಕೆ ಹುಟ್ಟಿಕೊಂಡಿತು ಎನ್ನಲಾಗುತ್ತಿದೆ. ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಅಧಿಕಾರ ಕಳೆದುಕೊಂಡ ರಾಜಕೀಯ ಬೆಳವಣಿಗೆಯನ್ನು ಕಿತ್ತೂರು ಉತ್ಸವದೊಂದಿಗೆ ತಳುಕು ಹಾಕಿ ಮಾತನಾಡಲು ಆರಂಭಿಸಲಾಯಿತು. ಇದರಿಂದಾಗಿ ಕಿತ್ತೂರು ಉತ್ಸವಕ್ಕೆ ಆಗಮಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡತೊಡಗಿದವು.
ಕಾಲಕ್ರಮೇಣ ಈ ನಂಬಿಕೆ ಮತ್ತಷ್ಟು ಚರ್ಚೆಗೆ ಕಾರಣವಾಯಿತು. ಕೆಲ ಮುಖ್ಯಮಂತ್ರಿಗಳು ಕಿತ್ತೂರು ಉತ್ಸವದಲ್ಲಿ ಭಾಗವಹಿಸುವುದರಿಂದ ದೂರ ಉಳಿದಿದ್ದಾರೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು.

TV24 News Desk
the authorTV24 News Desk

Leave a Reply

error: Content is protected !!