Uncategorized

ಎಂಡಿಎಂಎ ಡ್ರಗ್ ತಯಾರಿಸಿ ಮೂರು ರಾಜ್ಯಕ್ಕೆ ಹಂಚುತ್ತಿದ್ದ ಕಾರ್ಖಾನೆ ಮೇಲೆ ದಾಳಿ!

ಬೆಳಗಾವಿ:

ಮೂರು ರಾಜ್ಯಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಕಾರ್ಖಾನೆ ಮೇಲೆ ದಾಳಿ ನಡೆಸಲಾಗಿದೆ.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಹಾಜಗೋಳಿ ಗ್ರಾಮದಲ್ಲಿ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಲಾಗಿದ್ದು ಕೋಳಿ ಫಾರ್ಮ್ ಹೆಸರಿನಲ್ಲಿ ಎಂಡಿಎಂಎ ಡ್ರಗ್ಸ್ ತಯಾರು ಮಾಡಲಾಗುತ್ತಿತ್ತು.ಮಹಾರಾಷ್ಟ್ರ ಮಾದಕ ವಸ್ತು ವಿರೋಧಿ ಟಾಸ್ಕ್ ಫೋರ್ಸ್ ನಿಂದ ದಾಳಿ ನಡೆಸಲಾಗಿದ್ದು ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಹಾಜಗೋಳಿ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಈ ಗ್ರಾಮ
ಬೆಳಗಾವಿ ಜಿಲ್ಲೆಯಿಂದ ಕೇವಲ 20ಕಿಮಿ ದೂರದಲ್ಲಿದ್ದು ಮಾದಕ ವಸ್ತುಗಳ ಘಾಟು ಬೆಳಗಾವಿ ಹಾಗೂ ಕರ್ನಾಟಕಕ್ಕೂ ಅಂಟಿಕೊಂಡಿತಾ ಎನ್ನುವ ಅನುಮಾನಗಳು ಶುರುವಾಗಿವೆ.
ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕಕ್ಕೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಕಾರ್ಖಾನೆಯಲ್ಲಿ ಸದ್ಯ
1ಕೋಟಿ 13ಲಕ್ಷ ಮೌಲ್ಯದ 208ಗ್ರಾಮ ಡ್ರಗ್ಸ್, ರಾಸಾಯನಿಕ, ಹಾಗೂ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ.ಬೆಳಗಾವಿಯ ಇಬ್ಬರು ಸೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಜನರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!